ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಶನಿವಾರ ‘ಅತ್ಯಂತ ಕಳಪೆ’ ವರ್ಗದಲ್ಲಿ ದಾಖಲಾಗಿದೆ.

ಹವಾಮಾನ ಮೇಲ್ವಿಚಾರಣಾ ಸಂಸ್ಥೆಗಳ ಪ್ರಕಾರ, ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳಿಂದಾಗಿ ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತಷ್ಟು ಹದಗೆಡುವ ಮುನ್ಸೂಚನೆ ಇದೆ.

ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ಇಂದು ಮಧ್ಯಾಹ್ನ 12 ಗಂಟೆಗೆ 301 ರಷ್ಟು ದಾಖಲಾಗಿದೆ. ಅದು ಶುಕ್ರವಾರ 261 ಇತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಗಾಜಿಯಾಬಾದ್ನಲ್ಲಿ 286, ಫರಿದಾಬಾದ್ನಲ್ಲಿ 268, ಗುರುಗ್ರಾಮ್ನಲ್ಲಿ 248, ನೋಯ್ಡಾದಲ್ಲಿ 284 ಮತ್ತು ಗ್ರೇಟರ್ ನೋಯ್ಡಾದಲ್ಲಿ 349 ದಾಖಲಾಗಿದೆ.

ಸೊನ್ನೆಯಿಂದ 50 ರ ನಡುವಿನ AQI ಅನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತ್ಯಂತ ಕಳಪೆ’ ಮತ್ತು 401 ರಿಂದ 500 ಅತ್ಯಂತ ‘ಗಂಭೀರ’ ಎಂದು ಪರಿಗಣಿಸಲಾಗುತ್ತದೆ.

ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳು, ಪಟಾಕಿ ಮತ್ತು ಭತ್ತದ ತ್ಯಾಜ್ಯ ಸುಡುವಿಕೆಯಿಂದ ಹೊರಸೂಸುವ ಕಾಕ್ಟೈಲ್ ಹಾಗೂ ವಾಹನ ಮಾಲಿನ್ಯ ಚಳಿಗಾಲದಲ್ಲಿ ದೆಹಲಿ-ಎನ್ಸಿಆರ್ನ ಗಾಳಿಯ ಗುಣಮಟ್ಟವನ್ನು ಅಪಾಯಕಾರಿ ಮಟ್ಟಕ್ಕೆ ತಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!