March 23, 2026
Monday, March 23, 2026
spot_img

Air Quality | ಎಕ್ಸ್‌ಪ್ರೆಸ್‌ ವೇ ನಷ್ಟೇ ವೇಗವಾಗಿ ಕುಸಿಯುತ್ತಿದೆ ಕರ್ನಾಟಕದ ಗಾಳಿಯ ಗುಣಮಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುಧಾರಣೆಯ ಹಾದಿಯಲ್ಲಿದ್ದ ವಾಯು ಗುಣಮಟ್ಟ ಮತ್ತೆ ದಿಢೀರ್ ಕುಸಿತ ಕಂಡಿದೆ. ನಿನ್ನೆಯಷ್ಟೇ ತುಸು ನೆಮ್ಮದಿ ನೀಡಿದ್ದ ವಾತಾವರಣ ಇಂದು ಮತ್ತೆ ಹದಗೆಟ್ಟಿದ್ದು, ಕೇವಲ ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲೂ ಮಾಲಿನ್ಯದ ಮಟ್ಟ ಅಪಾಯಕಾರಿ ಹಂತ ತಲುಪಿದೆ.

ಕೆಲವೇ ದಿನಗಳ ಹಿಂದೆ 100ರ ಆಸುಪಾಸಿನಲ್ಲಿದ್ದ ಮಂಗಳೂರಿನ AQI ಇಂದು ಏಕಾಏಕಿ 174ಕ್ಕೆ ಏರಿಕೆಯಾಗಿರುವುದು ಕರಾವಳಿ ಜನರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರು (176) ಹಾಗೂ ಕುಂದಾನಗರಿ ಬೆಳಗಾವಿ (178) ವಾಯು ಮಾಲಿನ್ಯದಲ್ಲಿ ಬೆಂಗಳೂರನ್ನೇ (173) ಮೀರಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಪ್ರಸ್ತುತ ಈ ನಗರಗಳಲ್ಲಿನ ಗಾಳಿಯ ಗುಣಮಟ್ಟವು ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದೆ. ಈ ಏರಿಕೆ ಹೀಗೆಯೇ ಮುಂದುವರಿದರೆ ಕರ್ನಾಟಕದ ಪ್ರಮುಖ ನಗರಗಳು ದೇಶದ ಅತಿ ಹೆಚ್ಚು ಮಾಲಿನ್ಯ ಪೀಡಿತ ನಗರವಾದ ದೆಹಲಿಯ ಸ್ಥಿತಿಯನ್ನು ತಲುಪಲು ಬಹಳ ದಿನ ಬೇಕಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:

ಕಲುಷಿತ ಗಾಳಿಯ ಸೇವನೆಯಿಂದ ಸಾರ್ವಜನಿಕರಲ್ಲಿ ಈ ಕೆಳಗಿನ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿದೆ:

ಶ್ವಾಸಕೋಶದ ಕ್ಯಾನ್ಸರ್ ಮತ್ತು ದೀರ್ಘಕಾಲದ ಉಸಿರಾಟದ ತೊಂದರೆ.

ಅಸ್ತಮಾ ರೋಗಿಗಳಲ್ಲಿ ಉಲ್ಬಣಗೊಳ್ಳುವ ಸಮಸ್ಯೆಗಳು.

ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಹೆಚ್ಚಳ.

ಪರಿಸ್ಥಿತಿಯನ್ನು ಗಮನಿಸಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಮಾಲಿನ್ಯ ತಡೆಗೆ ಸಹಕರಿಸುವುದು ಅನಿವಾರ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !