October 10, 2026
Saturday, October 10, 2026
spot_img

CINE | OTTಗೆ ಬರ್ತಿದೆ ‘ಚಿನ್ನಾರಿ ಮುತ್ತ’ನ ವೆಬ್ ಸರಣಿ: ‘ರಾಕ್ಷಸ’ನ ನೋಡೋಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಓಟಿಟಿ ಪ್ರೇಕ್ಷಕರಿಗಾಗಿ ಮತ್ತೊಂದು ಹೊಸ ಕ್ರೈಮ್-ಥ್ರಿಲ್ಲರ್ ವೆಬ್ ಸರಣಿ ಸಿದ್ಧವಾಗಿದ್ದು, ‘ರಾಕ್ಷಸ’ ಎಂಬ ಈ ಸರಣಿ ಶೀಘ್ರದಲ್ಲೇ ಜೀ-5 ಕನ್ನಡದಲ್ಲಿ ಪ್ರಸಾರವಾಗಲಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಸರಣಿಯ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ.

ಈ ಪ್ರಾಜೆಕ್ಟ್‌ನ್ನು ತರುಣ್ ಸುಧೀರ್ ತಮ್ಮ ಬ್ಯಾನರ್ ಮೂಲಕ ನಿರ್ಮಿಸಿದ್ದು, ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಯೂರಿ, ಅಭಿಜಿತ್, ಅವಿನಾಶ್, ಮಾಳವಿಕಾ ಹಾಗೂ ಅಪ್ಪಣ್ಣ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಕ್ರೈಮ್ ಮತ್ತು ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯ ಈ ಕಥೆ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲೇ ಸಾಗುತ್ತದೆ. ಈ ಭಾಗವನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ವೆಬ್ ಸರಣಿ ಎನ್ನುವುದು ವಿಶೇಷ. ಒಟ್ಟು ಏಳು ಸಂಚಿಕೆಗಳಿರುವ ಈ ಸರಣಿ ಫೆಬ್ರವರಿ 20ರಿಂದ ಸ್ಟ್ರೀಮಿಂಗ್ ಆಗಲಿದೆ.

Must Read