ಗಾಜಾ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ: 500 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಾಜಾ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಿಂದ 500 ಮಂದಿ ಸಾವನ್ನಪ್ಪಿರುವುದಾಗಿ ಪ್ಯಾಲೆಸ್ತೀನಿಯನ್ ಆರೋಗ್ಯ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿದ ಇಸ್ರೇಲ್‌, ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ನಡೆಸಿದ ರಾಕೆಟ್ ಉಡಾವಣೆ ವಿಫಲವಾಗಿ ದುರಂತ ನಡೆದಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ʻಮಂಗಳವಾರ ಗಾಜಾ ನಗರದ ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆಯಲ್ಲಿ ನಡೆದ ಸ್ಫೋಟಕ್ಕೆ ನಾವು ಹೊಣೆಯಲ್ಲ, ಭಯೋತ್ಪಾದಕರು ನಡೆಸಿದ ರಾಕೆಟ್‌ ಉಡಾವಣೆ ವಿಫಲವಾಗಿ ತಮ್ಮವರನ್ನೇ ಬಲಿಪಡೆದಿದೆʼ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದರು.

ಬಾಂಬ್ ದಾಳಿ ಬಳಿಕ ರೋಗಿಗಳು, ಮಹಿಳೆಯರು ಮತ್ತು ಮಕ್ಕಳು ಸ್ಥಳಾಂತರಗೊಳಿಸಲಾಯಿತು. ಪ್ಯಾಲೆಸ್ತೀನ್ ಪ್ರಧಾನಿ ವೈಮಾನಿಕ ದಾಳಿಯನ್ನು ಘೋರ ಅಪರಾಧ ಮತ್ತು ನರಮೇಧ ಎಂದು ಬಣ್ಣಿಸಿದ್ದಾರೆ. ಇಸ್ರೇಲ್‌ಗೆ ಬೆಂಬಲ ನೀಡುವ ದೇಶಗಳೂ ಇದಕ್ಕೆ ಕಾರಣ ಎಂದು ಪ್ರಧಾನಿ ಮೊಹಮ್ಮದ್ ಷ್ಟಯ್ಯೆ ಆರೋಪಿಸಿದರು.

ಗಾಜಾದಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯನ್ನು ಪ್ಯಾಲೆಸ್ತೀನ್‌ ರಕ್ತಸಿಕ್ತ ಘಟನೆ ಎಂದು ಬಣ್ಣಿಸಿದ್ದು, ಯುಎಸ್ ಅಧ್ಯಕ್ಷ ಜೋ ಬಿಡನ್ ಇಸ್ರೇಲ್ಗೆ ಭೇಟಿ ನೀಡಿದ ನಂತರ ಈ ವೈಮಾನಿಕ ದಾಳಿ ನಡೆದಿದೆ. ಇಸ್ರೇಲ್‌ನ 11 ದಿನಗಳ ಬಾಂಬ್ ದಾಳಿಯಲ್ಲಿ 3,000 ಜನರು ಸಾವನ್ನಪ್ಪಿರುವುದಾಗಿ ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!