ಹೊಸದಿಗಂತ ವರದಿ ವಿಜಯಪುರ:
ಬೆಂಗಳೂರು ಹೆದ್ದಾರಿ ಪಕ್ಕ ನಿಂತ ಯುವಕರ ಮೇಲೆ ಲಾರಿ ಹರಿದ ಪರಿಣಾಮ, ಸ್ಥಳದಲ್ಲಿಯೇ ನಾಲ್ಕು ಯುವಕರು ದಾರುಣವಾಗಿ ಅಸುನೀಗಿರುವ ಘಟನೆ ನಗರ ಹೊರಭಾಗದ ಹಿಟ್ನಳ್ಳಿ ಟೋಲ್ ನಾಕಾ ಬಳಿ ಮಂಗಳವಾರ ತಡ ರಾತ್ರಿ ನಡೆದಿದೆ.
ಯುವಕರು ಊಟಕ್ಕೆಂದು ಬೈಕನಲ್ಲಿ ಡಾಬಾವೊಂದಕ್ಕೆ ಹೋಗಿದ್ದರು. ಬೈಕ್ ಸಮೇತ ಹೆದ್ದಾರಿ ಪಕ್ಕಕ್ಕೆ ನಿಂತಿದ್ದ ವೇಳೆ ಯುವಕರ ಮೇಲೆ ಲಾರಿ ಹರಿದಿದ್ದು, ಯುವಕರು ಸಾವಿಗೀಡಾಗಿದ್ದಾರೆ.
ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಯುವಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಸಂಬಂಧ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.