October 28, 2026
Wednesday, October 28, 2026
spot_img

ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಹುಬ್ಬಳ್ಳಿಯ ಐಶ್ವರ್ಯ ಆಯ್ಕೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಪ್ರತಿಭೆ ಐಶ್ವರ್ಯ ಬಾಲೆಹೊಸೂರ ಅವರು ನ. 1ರಿಂದ 14ರ ವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಐಎಸ್‌ಎಸ್‌ಎ- ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಐಶ್ವರ್ಯ ಅವರು ಭಾರತವನ್ನು ಪ್ರತಿನಿಽಸುತ್ತಿದ್ದು, 50 ಮೀಟರ್ ಫ್ರೀ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಈ ಹಿಂದೆ ಜರ್ಮನಿಯಲ್ಲಿ ನಡೆದ ಜೂನಿಯರ್ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿರುವ ಇವರು, ರಾಜ್ಯ, ರಾಷ್ಟ್ರ ಹಾಗೂ ಪ್ರತಿಷ್ಠಿತ ದಸರಾ ಕ್ರೀಡಾಕೂಟಗಳಲ್ಲಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ನಾಲ್ಕು ವರ್ಷಕ್ಕೊಮ್ಮೆ ಜರುಗುವ ಈ ಪ್ರತಿಷ್ಠಿತ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ 90ಕ್ಕೂ ಹೆಚ್ಚು ದೇಶಗಳ 1000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇಂತಹ ಅತ್ಯುನ್ನತ ಹಂತದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶೂಟರ್ ಭಾಗವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐಶ್ವರ್ಯ ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುವ ಮೂಲಕ ನಮ್ಮ ದೇಶ, ರಾಜ್ಯ ಹಾಗೂ ಧಾರವಾಡ ಜಿಲ್ಲೆಗೆ ಕೀರ್ತಿ ತರಲಿ. ಮುಂದೆ ಅವರ ಒಲಿಂಪಿಕ್ ಕನಸು ನನಸಾಗಲಿ ಎಂದು ತರಬೇತುದಾರರಾಗಿ ಹಾಗೂ ತಂದೆಯಾಗಿ ಆಶಿಸುತ್ತೇನೆ ಎಂದು ಮಾಜಿ ಸೈನಿಕರು ಮತ್ತು ತರಬೇತುದಾರ ರವಿಚಂದ್ರ ಬಾಲೆಹೊಸೂರು ತಿಳಿಸಿದ್ದಾರೆ.

Must Read