ಬಹುನೀರಿಕ್ಷಿತ ಐಶ್ವರ್ಯಾ ರೈ ಅಭಿನಯದ ಪೊನ್ನಿಯಿನ್​ ಸೆಲ್ವನ್​ ಸಿನಿಮಾಗೆ ಎದುರಾಗಿದೆ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಪೊನ್ನಿಯಿನ್​ ಸೆಲ್ವನ್​ಗೆ ಇದೀಗ ಸಂಕಷ್ಟ ಎದುರಾಗಿದೆ.
ಚೆನ್ನೈ ಮೂಲದ ಸಂಘಟನೆಯೊಂದು ಚಿತ್ರತಂಡಕ್ಕೆ ನೋಟಿಸ್​ ಜಾರಿ ಮಾಡಿದೆ.
ಐಶ್ವರ್ಯಾ ರೈ, ವಿಕ್ರಮ್​, ತ್ರಿಶಾ ಸೇರಿದಂತೆ ಬಹುತಾರಾಗಣವಿರುವ ಈ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ ಸಿನಿಮಾ ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪೋಸ್ಟರ್​ ಭಾರೀ ಮೆಚ್ಚುಗೆ ಗಳಿಸಿತ್ತು.
ಆದರೆ ಈ ಚಿತ್ರದ ವಿರುದ್ಧ ಚೋಳ ಸಮುದಾಯವೊಂದು ಗರಂ ಆಗಿದೆ. ಚಿತ್ರದಲ್ಲಿ ಚೋಳ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಈ ಸಮುದಾಯದ ಸಂಘಟನೆಯೊಂದು ಕೋರ್ಟ್ ಮೆಟ್ಟಿಲೇರಿದೆ.
ಕಲ್ಕಿ ಕೃಷ್ಣಮೂರ್ತಿ ಅವರು ಬರೆದಿರುವ ಪುಸ್ತಕದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ ಸದ್ಯ ಕಾನೂನು ನೋಟಿಸ್​ ನೀಡಲಾಗಿದ್ದು, ಚಿತ್ರತಂಡ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!