ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಐಶ್ವರ್ಯಾ ರೈ ಕಾರಿಗೆ ಮುಂಬೈನ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ.
ನಟಿ ಐಶ್ವರ್ಯಾ ರೈ ಅಪಘಾತದ ವೇಳೆ ಕಾರಿನಲ್ಲಿ ಇರಲಿಲ್ಲ ಎನ್ನಲಾಗಿದೆ.ನಂಬರ್ ಪ್ಲೇಟ್ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ಹೊತ್ತಾಗಿದೆ ಎಂದು ವರದಿಗಳು ತಿಳಿಸಿವೆ. ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎನ್ನಲಾಗಿದೆ. ಒಂದಿಷ್ಟು ಹೈಡ್ರಾಮಾ ಬಳಿಕ ಬೌನ್ಸರ್ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ.