ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಅಮೆರಿಕ ದೇಶಗಳ ನಡುವಿನ ಸಹಯೋಗವನ್ನು ಬಲಪಡಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಾಯಕತ್ವವು ಅನನ್ಯ ಎಂದು ಅಮೆರಿಕಾದ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತಕ್ಕೆ ಎರಡು ದಿನಗಳ ಬೇಟಿಯಲ್ಲಿರುವ ಜೇಕ್ ಸುಲ್ಲಿವಾನ್ ಅವರು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಹಾಗೂ ಅಮೆರಿಕದ ಸಂಬಂಧ ವೃದ್ದಿಗಾಗಿ ಪ್ರಾರಂಭಿಸಲಾಗಿರುವ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಉಪಕ್ರಮ ಯೋಜನೆಯು ಎರಡು ರಾಷ್ಟ್ರಗಳ ಪ್ರತಿಯೊಬ್ಬರಿಗೂ ಉಪಯುಕ್ತವಾದ ಕ್ರಮವಾಗಿದೆ. ಈ ಯೋಜನೆ ಜಾರಿಯ ಹಿಂದಿನ ಯಶಸ್ಸಿನ ವ್ಯಕ್ತಿಯು ಅಜಿತ್ ದೋವಲ್ ಅವರಾಗಿದ್ದಾರೆ ಎಂದರು.
ಜೊತೆಗೆ ನಾಗರಿಕ ಪರಮಾಣು ಸಹಕಾರವನ್ನು ಉತ್ತೇಜಿಸಲು ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ , ಬಾಬಾ ಪರಮಾಣು ಸಂಶೋಧನಾ ಕೇಂದ್ರ ದಂತಹ ಭಾರತ ಸರ್ಕಾರದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧಗಳನ್ನು ತಗೆದು ಹಾಕುವುದಾಗಿ ಅಮೆರಿಕಾದ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಅಮೆರಿಕ 47 ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಭಾರತಕ್ಕೆ ಆಗಮಿಸಿರುವ ನಿರ್ಗಮಿತ ಅಮೆರಿಕಾದ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ತಮ್ಮ ಎರಡು ದಿನಗಳ ಭಾರತ ಭೇಟಿಯಲ್ಲಿ ಪರಮಾಣು ತಂತ್ರಜ್ಞಾನದ ಕುರಿತು ಕೆಲಸ ಮಾಡುತ್ತಿರುವ ಭಾರತದ ಸಂಸ್ಥೆಗಳ ಮೇಲೆ ಅಮೆರಿಕ ಸರ್ಕಾರ ಹೊರಡಿಸಿರುವ ನಿರ್ಬಂಧಗಳನ್ನು ತೆಗದುಹಾಕುವುದಾಗಿ ತಿಳಿಸಿದರು.
ಭಾರತ ಭೇಟಿಯ ಕುರಿತು ಮಾತನಾಡಿದ ಅವರು ನಾನು ರಕ್ಷಣಾ ಸಲಹೆಗಾರನಾಗಿ ನನ್ನ ಕೊನೆಯ ವಿದೇಶ ಪ್ರವಾಸವಾಗಿದೆ. ನನ್ನ ಅಂತಿಮ ಆಡಳಿತ್ಮಾಕ ವಿದೇಶ ಪ್ರವಾಸವು ಭಾರತಕ್ಕೆ ಭೇಟಿ ನೀಡುವುದರಿಂದ ಕೊನೆಗೊಳ್ಳುತ್ತಿದೆ. ಇದಕ್ಕಿಂತ ನಾನು ಉತ್ತಮ ಮಾರ್ಗವನ್ನು ಯೋಚಿಸಲು ಸಾಧ್ಯವಿಲ್ಲ ಎಂದರು. ಆದರೊಂದಿಗೆ ಭಾರತದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧವನ್ನು ತೆರವು ಮಾಡುತ್ತಿರುವುದ ನನ್ನ ಪಾಲಿನ ಐತಿಹಾಸಿಕ ಸಾಧನೆಯಾಗಿದೆ ಎಂದರು. ಇದರೊಂದಿಗೆ ಅವರು “ಅಮೆರಿಕ ಮತ್ತು ಭಾರತ ದೇಶಗಳು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಪರಿಶೋಧನೆಯಲ್ಲಿ ದೊಡ್ಡ ದಾಪುಗಾಲುಗಳನ್ನಿಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
2000 ದಲ್ಲಿ ಭಾರತವು ವಾಜಪೇಯಿ ಪರಮಾಣು ರಾಷ್ಟ್ರವಾದಗಿನಿಂದಲೂ ತಕರಾರು ತಗೆದಿರುವ ಅಮೆರಿಕವು ಭಾರತದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತ್ತು. ಕಾಲನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೂ ಸಹ ಪರಮಾಣು ಕುರಿತು ಅಮೆರಿಕವು ಭಾರತದ ಮೇಲೆ ನಿರ್ಬಂಧವಿದ್ದವು. ಆದರೆ ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾರ್ಯದಿಂದ ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೇಲಿಂದಲೂ ತಗೆದು ಹಾಕಲಾಗುತ್ತದೆ. ಇದರೊಂದಿಗೆ ಭಾರತದ ಪರಮಾಣು ಸಂಸ್ಥೆಗಳು ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಶ್ವದ ಇತರೆ ರಾಷ್ಟ್ರಗಳ ಪರಮಾಣು ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸಬಹುದಾಗಿದೆ.