ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಭಾನುವಾರ ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಅವರನ್ನು ಭೇಟಿಯಾಗಿದ್ದಾರೆ.
ಜುಲೈ 2 ರಂದು ಪವಾರ್ ವಿರುದ್ಧ ಬಂಡಾಯವೆದಿದ್ದ ಅಜಿತ್ ಪವಾರ್, ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ ಬೆಂಬಲಿತ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದರು . ಆ ಬಳಿಕ ಇದೇ ಮೊದಲ ಬಾರಿ ಎನ್‌ಸಿಪಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ.
ಪ್ರಫುಲ್ ಪಟೇಲ್, ಛಗನ್ ಭುಜಬಲ್ ಹಾಗೂ ಎನ್ಸಿಪಿಯ ಕೆಲವು ಸಚಿವರು ಉಪಸ್ಥಿತರಿದ್ದರು.
ನಾವು ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಬಂದಿದ್ದಾರೆ ಎಂದು ಪ್ರಫುಲ್ ಪಟೇಲ್ ಪ್ರತಿಕ್ರಿಯಿಸಿದ್ದು, ಈ ವೇಳೆ, ಅವರು (ಶರದ್ ಪವಾರ್) ಎನ್‌ಸಿಪಿಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಪವಾರ್ ಬಳಿ ಕೇಳಿಕೊಂಡರು. ಆದರೆ, ಇದಕ್ಕೆ ಶರದ್ ಪವಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದರು.
ಶರದ್ ಪವಾರ್ ಶಿಬಿರದ ಮೂಲಗಳ ಪ್ರಕಾರ, ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮತ್ತು ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಕೂಡ ಸಂಭಾಷಣೆಯ ಸಮಯದಲ್ಲಿ ಶರದ್ ಅವರೊಂದಿಗೆ ಇದ್ದರು.