ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ‘ತಲಾ’ ಅಜಿತ್ ಕುಮಾರ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತೆರೆಮೇಲೆ ಅವರು ಎಂಟ್ರಿ ಕೊಟ್ಟರೆ ಸಾಕು, ಥಿಯೇಟರ್‌ನಲ್ಲಿ ವಿಸಿಲ್, ಪಟಾಕಿ ಸೌಂಡು ನೆಕ್ಸ್ಟ್ ಲೆವೆಲ್ ಇರುತ್ತೆ. ಆದ್ರೆ, ಈ ಸಲ ಅಜಿತ್ ಕುಮಾರ್ ಸಿನೆಮಾ ಡೈಲಾಗ್ ಹೊಡೆಯೋಕೆ ಬರ್ತಿಲ್ಲ, ಬದಲು ಅಸಲಿ ರೇಸಿಂಗ್ ಕಾರು ಹತ್ತಿ, ಟ್ರ್ಯಾಕ್‌ನಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ.
ಹೌದು, ಅಜಿತ್ ಕುಮಾರ್ ಅವರ ಅಸಲಿ ಲೈಫ್‌ನ ರೇಸಿಂಗ್ ಜರ್ನಿ ಆಧಾರಿತ ‘ಗ್ಲಾಡಿಯೇಟರ್ಸ್: ಇನ್ ಪರ್ಸ್ಯೂಟ್ ಆಫ್ ಚಾಲೆಂಜೆಸ್’ ಅನ್ನೋ ಬಿಗ್ ಡಾಕ್ಯುಮೆಂಟರಿಯ ಟ್ರೇಲರ್ ಈಗ ಅಫಿಷಿಯಲ್ ಆಗಿ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ.
ಟ್ರೇಲರ್‌ನಲ್ಲಿ ರೇಸಿಂಗ್ ಧಮಾಕಾ
ಈ ನಾಲ್ಕು ನಿಮಿಷದ ಟ್ರೇಲರ್ ನೋಡಿದ್ರೆ ಸಾಕು, ಎಂಥವರಿಗಾದ್ರೂ ಮೈ ನವಿರೇರುತ್ತೆ. ಕಾರುಗಳ ಇಂಜಿನ್ ಅಬ್ಬರ, ರೇಸಿಂಗ್ ಟ್ರ್ಯಾಕ್‌ನ ಟೆನ್ಷನ್, ಹೈ-ಸ್ಪೀಡ್ ಡ್ರೈವಿಂಗ್‌ನಲ್ಲಿ ಇರೋ ರಿಸ್ಕ್ ಎಲ್ಲವನ್ನೂ ಕಣ್ಣಿಗೆ ಕಟ್ಟೊಹಾಗೆ ತೋರಿಸಿದ್ದಾರೆ. ಅಜಿತ್ ಸಿನೆಮಾದಲ್ಲಿ ಕಾರು ಚಲಾಯಿಸೋದು ನಾವೆಲ್ಲಾ ನೋಡಿದ್ದೀವಿ. ಆದ್ರೆ, ರಿಯಲ್ ಲೈಫ್‌ನಲ್ಲಿ ಪ್ರೊಫೆಷನಲ್ ರೇಸರ್ ಆಗಿ ಅವರು ಅನುಭವಿಸುವ ಕಷ್ಟ, ತಗೋಳೋ ಟ್ರೈನಿಂಗ್ ಹಾಗೂ ಅವರ ಗೆಲುವಿನ ಹಿಂದಿರೋ ಶ್ರಮವನ್ನು ಈ ಟ್ರೇಲರ್‌ನಲ್ಲಿ ಎದ್ದು ಕಾಣುವಂತೆ ತೋರಿಸಲಾಗಿದೆ.
ಈ ಡಾಕ್ಯುಮೆಂಟರಿಯ ಸ್ಪೆಷಾಲಿಟಿ ಏನಪ್ಪಾ ಅಂದ್ರೆ, ಅಜಿತ್ ಅವರ ಧರ್ಮಪತ್ನಿ, ನಟಿ ಶಾಲಿನಿ ಅಜಿತ್‌ಕುಮಾರ್ ಮತ್ತು ಅವರ ಮಕ್ಕಳಾದ ಅನೌಷ್ಕಾ ಹಾಗೂ ಆದ್ವಿಕ್ ಕ್ಯಾಮೆರಾ ಮುಂದೆ ಬಂದು ಮಾತನಾಡಿದ್ದಾರೆ. ಸಿನೆಮಾ ರಂಗದಿಂದ ದೂರವಿರೋ ಶಾಲಿನಿ ಅವರು, ಅಜಿತ್‌ಗೆ ರೇಸಿಂಗ್ ಅಂದ್ರೆ ಎಷ್ಟು ಹುಚ್ಚು, ಅವರ ಸತತ ಪ್ರಯತ್ನ ಮತ್ತು ಸೋಲು-ಗೆಲುವನ್ನು ಅವರು ಹೇಗೆ ಸ್ವೀಕರಿಸ್ತಾರೆ ಎಂದು ಮನಸಾರೆ ಹಂಚಿಕೊಂಡಿದ್ದಾರೆ. ಇನ್ನು ಮಕ್ಕಳು ತಮ್ಮ ಅಪ್ಪನ ರೇಸಿಂಗ್ ಲೈಫ್ ಬಗ್ಗೆ ಮುದ್ದಾಗಿ ಹೇಳಿರೋದು ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಅಷ್ಟೇ ಅಲ್ಲದೆ, ಭಾರತದ ಮೊದಲ ಫಾರ್ಮುಲಾ ಒನ್ ಡ್ರೈವರ್ ನರೇನ್ ಕಾರ್ತಿಕೇಯನ್ ಕೂಡ ಈ ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾ ರಂಗದಲ್ಲಿ ಅಷ್ಟು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ರೇಸಿಂಗ್ ಅಂತ ಬಂದಾಗ ಅಜಿತ್ ತೋರಿಸೋ ಡೆಡಿಕೇಷನ್ ಬಗ್ಗೆ ನರೇನ್ ಶಹಬ್ಬಾಸ್ ಎಂದಿದ್ದಾರೆ. ಅಜಿತ್ ಜೊತೆ ರೇಸಿಂಗ್ ಟೀಮ್‌ನಲ್ಲಿದ್ದ ಸಹೋದ್ಯೋಗಿಗಳು ಕೂಡ ಅವರ ಸರಳತೆ ಹಾಗೂ ಶ್ರಮದ ಬಗ್ಗೆ ಮಾತನಾಡಿದ್ದಾರೆ.
ಈ ಹಿಂದೆ ‘ಮದರಸಾಪಟ್ಟಿನಂ’, ‘ದೈವತಿರುಮಗಳ್’ ನಂತಹ ಸೂಪರ್ ಹಿಟ್ ಸಿನೆಮಾ ಕೊಟ್ಟ ಎ.ಎಲ್ ವಿಜಯ್ ಈ ಡಾಕ್ಯುಮೆಂಟರಿಯನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಇನ್ನು ಜಿ.ವಿ ಪ್ರಕಾಶ್ ಕುಮಾರ್ ಕಂಪೋಸ್ ಮಾಡಿರೋ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಟ್ರೇಲರ್‌ಗೆ ಬೇರೆನೇ ಲೆವೆಲ್ ಎನರ್ಜಿ ತಂದುಕೊಟ್ಟಿದೆ.
ಪ್ರಸ್ತುತ ಟ್ರೇಲರ್ ನೋಡಿ ಅಜಿತ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಈ ಡಾಕ್ಯುಮೆಂಟರಿ ರಿಲೀಸ್ ದಿನಾಂಕ ಯಾವಾಗ ಅನೌನ್ಸ್ ಆಗುತ್ತೋ ಎಂದು ಕಾತರದಿಂದ ಕಾಯುತ್ತಿದ್ದಾರೆ.



