ಪುಣೆ-ಬೆಂಗಳೂರು ಮಾರ್ಗದಲ್ಲಿ ಆಕಾಸ ಏರ್​​ ವಿಮಾನ ಹಾರಾಟ ಶುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಆಕಾಸ ಏರ್​​ ಸಂಸ್ಥೆಯ ವಿಮಾನವು ಪುಣೆ-ಬೆಂಗಳೂರು ಮಾರ್ಗದಲ್ಲಿ ಶನಿವಾರ (ನ.26)ದಿಂದ ಹಾರಾಟ ಶುರು ಮಾಡಿದ್ದು, ಈ ಎರಡೂ ನಗರಗಳ ನಡುವೆ ಪ್ರತಿದಿನ ಮೂರು ವಿಮಾಗಳು ಸಂಚರಿಸುವುದಾಗಿ ಆಕಾಸ ಏರ್​ ಪ್ರಕಟಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಆಕಾಸ ಏರ್​ ಸಂಸ್ಥೆ, ಇದೇ ಮೊದಲ ಬಾರಿಗೆ ಪುಣೆಯಿಂದ ಆಕಾಸ ಏರ್​​ನ ವಿಮಾನ ಟೇಕ್​ ಆಫ್​ ಆಗಿ ಬೆಂಗಳೂರಿಗೆ ಹೊರಟಿದೆ. ಇದು ತುಂಬ ಅದ್ಭುತ ಎನ್ನಿಸುತ್ತದೆ. ಎರಡೂ ನಗರಗಳ ನಡುವೆ ಪ್ರತಿದಿನ ಮೂರು ವಿಮಾನಗಳು ಸಂಚಾರ ಮಾಡಲಿದ್ದು, ಆಕಾಸ ಏರ್​​ನ ವೆಬ್​ಸೈಟ್​ಗೆ ಭೇಟಿಕೊಟ್ಟು, ಅಲ್ಲಿಂದಲೇ ಟಿಕೆಟ್​ ಬುಕ್​ ಮಾಡಬಹುದು’ ಎಂದು ತಿಳಿಸಿದೆ.

ಈಗಾಗಲೇ ಬೆಂಗಳೂರು-ಮುಂಬಯಿ ನಡುವೆ ಐದು ವಿಮಾನಗಳು ಸಂಚಾರ ಮಾಡುತ್ತಿದ್ದವು. ನವೆಂಬರ್​ 26ರಿಂದ ಈ ಮಾರ್ಗಕ್ಕೆ ಮತ್ತೆರಡು ವಿಮಾನಗಳು ಸೇರ್ಪಡೆಗೊಂಡಿವೆ.
ಆಗಸ್ಟ್​ 7ರಂದುಆಕಾಸ ಏರ್​ ಸಂಸ್ಥೆ ಕಾರ್ಯಾರಂಭ ಮಾಡಿದ್ದು , ಮೊದಲ ವಿಮಾನ ಮುಂಬಯಿ-ಅಹ್ಮದಾಬಾದ್​ ಮಾರ್ಗದಲ್ಲಿ ಹಾರಾಟ ನಡೆಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!