ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ ಎರಡು ತಿಂಗಳಲ್ಲಿ, ಎಕ್ಸ್ ನಲ್ಲಿ ಅವರ ಎಲ್ಲಾ ಪೋಸ್ಟ್‌ಗಳು ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.
“ಹಲವು ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಸ್ಥಾಪನೆಯಾದಾಗ, ಸಮಾಜವಾದಿ ಪಕ್ಷ (ಎಸ್‌ಪಿ) ಅದನ್ನು ವಿರೋಧಿಸಿತ್ತು … ಕಳೆದ ಎರಡು ತಿಂಗಳಲ್ಲಿ, ಎಸ್‌ಪಿ ಮುಖ್ಯಸ್ಥರ ಎಲ್ಲಾ ಟ್ವೀಟ್‌ಗಳು ಅತಿದೊಡ್ಡ ಆಧ್ಯಾತ್ಮಿಕ ಮಹಾಕುಂಭಕ್ಕೆ ವಿರುದ್ಧವಾಗಿವೆ. ಮತ್ತು ಈ ಶತಮಾನದ ಸಾಂಸ್ಕೃತಿಕ ಕಾರ್ಯಕ್ರಮ” ಎಂದು ಮಿಲ್ಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್ ಹೇಳಿದರು.
ಇಲ್ಲಿಯವರೆಗೆ 34 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.