ಅಕ್ಷತಾ ಮೂರ್ತಿ ಮೇಲೆ ತೆರಿಗೆ ವಂಚನೆ ಆರೋಪ: ತನಿಖೆಗೆ ಪತಿ ರಿಷಿ ಸುನಕ್​ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ – ಸುಧಾ ಮೂರ್ತಿ ಪುತ್ರಿ, ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್​ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಮೇಲೆ ಕೇಳಿ ಬಂದ ತೆರಿಗೆ ವಂಚನೆ ಆರೋಪ ಮತ್ತು ತೆರಿಗೆ ವಿವರಗಳನ್ನು ಸೋರಿಕೆ ಕುರಿತು ತನಿಖೆ ನಡೆಸಲು ರಿಷಿ ಸುನಕ್​ ಇಂಗ್ಲೆಂಡ್​ ಸಂಸತ್ತಿಗೆ ಒತ್ತಾಯಿಸಿದ್ದಾರೆ.

ಅಕ್ಷತಾ ಮೂರ್ತಿ ಅವರ ಸಾಗರೋತ್ತರ ಆದಾಯಕ್ಕೆಸಂಬಂಧಿಸಿ ಇಂಗ್ಲೆಂಡ್​ನಲ್ಲಿ ತೆರಿಗೆ ಪಾವತಿಸದ ವಿವರಗಳನ್ನು ಸಂಸದರ ಸಿಬ್ಬಂದಿ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ರಿಷಿ ಸುನಕ್​ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.

ರಿಷಿ ಸುನಕ್​ 2018ರಲ್ಲಿ ಸಂಸದರಾದಾಗ ನೀಡಲಾದ ವೈಯಕ್ತಿಕ ವಿವರಗಳ ಬಗ್ಗೆ ಸಂಸತ್ತಿನ ಕೆಲವೇ ಸಿಬ್ಬಂದಿಗೆ ಮಾತ್ರ ಮಾಹಿತಿ ಇರುತ್ತದೆ. ಹೀಗಾಗಿ ತನ್ನ ಪತ್ನಿಯ ತೆರಿಗೆ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಈ ಆರೋಪ ನಿರಾಧಾರ ಎಂದು ಡೌನಿಂಗ್​ ಸ್ಟ್ರೀಟ್​ ತಿರಸ್ಕರಿಸಿದೆ.

ವಿವಾದ
ಹಣಕಾಸು ಸಚಿವ ರಿಷಿ ಸುನಕ್​ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದಲ್ಲಿ ಗಳಿಸಿದ ಹಣಕ್ಕೆ ಬ್ರಿಟನ್​ನಲ್ಲಿ ತೆರಿಗೆ ಪಾವತಿಸಿಲ್ಲ. ಅಕ್ಷತಾ ಅವರು ಇನ್ಫೋಸಿಸ್​ನಲ್ಲಿ ಶೇ.0.9 ರಷ್ಟು ಷೇರು ಹೊಂದಿದ್ದಾರೆ. ಅಲ್ಲದೇ, ನೂರಾರು ಕೋಟಿ ರೂ. ಡಿವಿಡೆಂಡ್‌ಗಳನ್ನು ಗಳಿಸುತ್ತಾರೆ. ಈ ಹಣಕ್ಕೆ ಅವರು ಬ್ರಿಟನ್​ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂದು ವಿವಾದ ಉಂಟಾಗಿದೆ.

ಇತ್ತ ತೆರಿಗೆ ವಿವಾದ ಉಂಟಾದ ಬಳಿಕ ಅಕ್ಷತಾ ಮೂರ್ತಿ ಭಾರತದಲ್ಲಿ ಗಳಿಸಿದ ಹಣಕ್ಕೂ ಬ್ರಿಟನ್​ನಲ್ಲಿ ತೆರಿಗೆ ಕಟ್ಟಲಾಗುವುದು ಎಂದು ಘೋಷಿಸಿದ್ದಾರೆ. ಕಾನೂನಾತ್ಮಕವಾಗಿ ನಾನ್​ ಡೊಮಿನಲ್​ ಆದಾಯಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲದಿದ್ದರೂ ವಿವಾದ ಇತ್ಯರ್ಥಗೊಳಿಸಲು ತೆರಿಗೆ ಕಟ್ಟಲು ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!