Sunday, June 4, 2023

Latest Posts

ಮಾಲ್ಡೀವ್ಸ್‌ ನಲ್ಲೂ ಮೊಳಗಿತು ಗಾಯತ್ರಿ ಮಂತ್ರ: ಅಕ್ಷಯ್‌ ಕುಮಾರ್‌ ಹೊಸ ವರ್ಷ ಸ್ವಾಗತಿಸಿದ್ದು ಹೀಗೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲಾ ನಟ ನಟಿಯರು ಹೊಸ ವರ್ಷಕ್ಕೆ ವಿದೇಶಕ್ಕೆ ಹಾರಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ಎಂಜಾಯ್‌ ಮಾಡೋದು ಕಾಮನ್.‌ ಆದರೆ ಅಲ್ಲಿ ಹೋದರೂ ನಮ್ಮ ಸಂಸ್ಕೃತಿ ಬಿಡಬಾರದು ಅನ್ನೋರು ಕೆಲವರು ಮಾತ್ರ.
ಹೀಗೆ ಮಾಲ್ಡೀವ್ಸ್‌ ನ ಸಮುದ್ರ ತೀರದಲ್ಲಿ ನಿಂತು ಗಾಯತ್ರಿ ಮಂತ್ರ ಪಠಿಸುವ ಮೂಲಕ ಹೊಸ ವರ್ಷವನ್ನು ನಟ ಅಕ್ಷಯ್‌ ಕುಮಾರ್‌ ಸ್ವಾಗತಿಸಿದ್ದಾರೆ.
ಅಕ್ಷಯ್‌ ಕುಮಾರ್‌ ಹಾಗೂ ಪತ್ನಿ ಟ್ವಿಂಕಲ್‌ ಖನ್ನಾ ಇಬ್ಬರೂ ಮಾಲ್ಡೀಬ್ಸ್‌ ಟ್ರಿಪ್ ನಲ್ಲಿ ಇದ್ದಾರೆ. ಇದೇ ವೇಳೆ ನಟ ಅಕ್ಷಯ್‌ ಕುಮಾರ್‌ ಮಾಲ್ಡೀವ್ಸ್‌ನಲ್ಲಿ ಐಷಾರಾಮಿ ರೆಸಾರ್ಟ್​ನಲ್ಲಿ ಸೂರ್ಯನನ್ನು ನೋಡುತ್ತಾ ಗಾಯತ್ರಿ ಮಂತ್ರ ಪಠಿಸಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಹೊಸ ವರ್ಷ, ಆದರೆ ನಾನು ಮಾತ್ರ ಹಳಬ. ನನ್ನ ಹಳೆಯ ಸ್ನೇಹಿತ ಸೂರ್ಯನನ್ನು ಎದ್ದಕೂಡಲೇ ಸ್ವಾಗತಿಸಿದೆ. 2022 ಅನ್ನು ಎಲ್ಲಾ ಪಾಸಿಟಿವ್‌ ನಿಂದ ಪ್ರಾರಂಭಿಸಿದ್ದೇನೆ. ಆದರೆ ಕೊರೋನಾ ಅಲ್ಲ… ಎಲ್ಲರ ಆರೋಗ್ಯ ಹಾಗೂ ಸಂತೋಷಕ್ಕಾಗಿ ಪ್ರಾರ್ಥಿಸುತ್ತಾ, ಸರ್ವರಿಗೂ ಹೊಸ ವರ್ಷದ ಶುಭಾಶಯಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!