ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಸಾಮಾಜಿಕ ಕಳಕಳಿ ಇರುವ ಸಿನಿಮಾಗಳನ್ನು ಮಾಡುವ ಅಕ್ಷಯ್ ನಿಜಜೀವನದಲ್ಲೂ ಇದಕ್ಕೆ ಬದ್ಧವಾಗಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ವಚ್ಛತೆಯೇ ಸೇವೆ ಹೆಸರಿನ ಅಭಿಯಾನ ಆರಂಭಿಸಿದ್ದು, ನಟ ಅಕ್ಷಯ್ ಕುಮಾರ್ ಸೇವೆಗೆ ಸಾಥ್ ನೀಡಿದ್ದಾರೆ.
ಅಕ್ಷಯ್ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು, ಬೀಚ್ ಕ್ಲೀನಿಂಗ್ ಮಾಡ್ತಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದಿದ್ದು, ಬೀಚ್‌ನಲ್ಲಿ ಬಿದ್ದಿದ್ದ ಗ್ಲಾಸ್ ಪೀಸ್, ಕಸವನ್ನು ಕ್ಲೀನ್ ಮಾಡ್ತಿದ್ದಾರೆ.
ಕ್ಲೀನ್ ಮಾಡೋದು ಅಂದ್ರೆ ಬರೀ ಸುತ್ತಮುತ್ತ ಕ್ಲೀನ್ ಮಾಡೋದು ಅಂತಲ್ಲ, ಅದು ಒಂದು ಮನಸ್ಥಿತಿ. ಬೇರೆ ದೇಶದಲ್ಲಿದ್ದೇನೆ ಆದರೆ ಸ್ವಚ್ಛತಾ ಅಭಿಯಾನಕ್ಕೆ ನಾನು ಸಾಥ್ ನೀಡುತ್ತೇನೆ. ಎಲ್ಲಿದ್ದರೂ ನನ್ನ ಸುತ್ತಮುತ್ತ ಶುಚಿಯಾಗಿಟ್ಟುಕೊಳ್ಳುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಇದಕ್ಕೆ ಫ್ಯಾನ್ಸ್ ಕಮೆಂಟ್ ಮಾಡಿದ್ದು, ನಿಮ್ಮ ಆಲೋಚನೆಗಳನ್ನು ಮೆಚ್ಚಿದ್ದೇವೆ, ಇದು ನಮಗೆ ಪ್ರೇರಣೆಯಾಗಿದೆ ಎಂದಿದ್ದಾರೆ.