ಹೊಸದಿಗಂತ ವರದಿ, ಕಲಬುರಗಿ:
ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ನಿರ್ಮಾಣಕ್ಕೆ ೫೦೦ ವರ್ಷ ಬೇಕಾಯಿತು,ಅದರಂತೆ ಆಳಂದ ರಾಘವ ಚೇತನ್ಯ ಶಿವಲಿಂಗ ನಿರ್ಮಾಣವನ್ನು ಮಾಡಲಾಗುವುದು ಎಂದು ಉತ್ತರಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು.
ಆಳಂದ ಪಟ್ಟಣದ ಎಸ್.ಆರ್.ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಸಭೆಯಲ್ಲಿ ರಾಘವ ಚೇತನ್ಯ ಶಿವಲಿಂಗ ಮತ್ತು ರುದ್ರಾಕ್ಷಿ, ಬೆಳ್ಳಿ ಗದೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆನಂದಿ ದೇವಿ ಮತ್ತು ರಾಘವ ಚೇತನ್ಯ ಪುಣ್ಯ ನೆಲದಲ್ಲಿ ಬಂದಿದ್ದು ಆನಂದ ಮಯವಾಗಿದೆ, ಶಾಸಕ ಗುತ್ತೇದಾರ ಅವರು ಕಾಶಿ ವಿಶ್ವನಾಥ ಬಂದು ಗಂಗಾಜಲ ತಂದಿದ್ದು ರಾಘವ ಚೇತನ್ಯ ಶಿವಲಿಂಗ ಶುದ್ಧೀಕರಿಸಿದ್ದಾರೆ ಎಂದರು.
ಸ್ವಾತಂತ್ರ ಬಂದಾಗಿನಿಂದ ಕಾಂಗ್ರೇಸ ಅಧಿಕಾರಕ್ಕೆ ಬಂದಾಗ ಸಮಾಜದ ಮಧ್ಯೆ ಜಾತಿಯ ವಿಷ ಬೀಜ ಬಿತ್ತುವುದಲ್ಲದೇ ಭ್ರಷ್ಟಾಚಾರ, ಲೂಟಿ ಮಾಡುವುದು ಇವರ ಕೆಲಸವಾಗಿದೆ. ದೇಶ ಇಂತಹ ಭವಿಷ್ಯ ಚಿಂತನೆ ಇಲ್ಲದೇ ಇವರು ಮಾಪಿಯಾ, ಪಿಎಫ್‌ಐ ಬೆಂಬಲ ಕೊಡುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಮಾತನಾಡಿ, ನೀರಾವರಿ, ರಸ್ತೆ, ಸಮೂದಾಯ ಭವನ, ಚೆಕ್ ಡ್ಯಾಂ, ಕೆರೆಗಳ ಕೆಲಸ ಮಾಡಿದ್ದೇನೆ, ರಾಘವ ಚೇತನ್ಯ ಶಿವಲಿಂಗ ಮಂದಿರ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಈ ಸಲದ ಚುನಾವಣೆ ನನ್ನನ್ನು ಮತ್ತೋಮ್ಮೆ ಗೆಲ್ಲಿಸಿ ಎಂದು ಮತಯಾಚಿಸಿದರು.