ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಎಣ್ಣೆ ಹೊಡೆಯೋ ಬೆಟ್ ನಡೆದಿದ್ದು, ಚಾಲೆಂಜ್ ಗೆದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಯ ತಿಮ್ಮೇಗೌಡ ಹಾಗೂ ದೇವರಾಜು ಅರ್ಧಗಂಟೆಯಲ್ಲಿ 90ಎಂಎಲ್‌ನ ಹತ್ತು ಪ್ಯಾಕೆಟ್ ಕುಡಿಯುವ ಚಾಲೆಂಜ್ ಕಟ್ಟಿದ್ದರು.
ಚಾಲೆಂಜ್ ಪೂರ್ತಿಮಾಡಿ ಅರ್ಧ ಗಂಟೆಯಲ್ಲಿ 900 ಎಂಎಲ್ ಕುಡಿದ ತಿಮ್ಮೇಗೌಡ ರಕ್ತವಾಂತಿ ಮಾಡಿ ನಿಲ್ದಾಣದಲ್ಲೇ ಮೃತಪಟ್ಟಿದ್ದಾರೆ. ಚಾಲೆಂಜ್ ನೀಡಿದ್ದ ದೇವರಾಜು ಪರಾರಿಯಾಗಿದ್ದು, ಕುಟುಂಬದವರು ಮೃತದೇಹವನ್ನು ಮನೆಗೆ ತಂದಿದ್ದಾರೆ.ತಲೆಮರೆಸಿಕೊಂಡವರ ವಿರುದ್ಧ ಪ್ರಕರಣ ದಾಖಲಾಗಿದೆ.