ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನೇ ಖುದ್ದು ತಯಾರಿಸಿದ ಮದ್ಯವನ್ನು ತನ್ನ ‘ಸಮಾನ ಮನಸ್ಕ’ ಸಹಪಾಠಿಗಳಿಗೆ ತೋರಿಸಲು ತರಗತಿಗೆ ತಂದಿದ್ದ ವಿದ್ಯಾರ್ಥಿ, ಎಲ್ಲರ ಮುಂದೆಯೇ ಆಕಸ್ಮಿಕವಾಗಿ ಮದ್ಯ ಚಿಮ್ಮಿ ಫಜೀತಿಗೊಳಗಾದ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.
ಹೈಸ್ಕೂಲ್ ವಿದ್ಯಾರ್ಥಿಯೋರ್ವ ಗಂಜಿ ಬಳಸಿ ಮದ್ಯ ‘ಸಂಶೋಧನೆ’ ನಡೆಸಿದ್ದು, ಅದನ್ನು ತರಗತಿಗೆ ತಂದಿದ್ದ. ಈ ವೇಳೆ ಗ್ಯಾಸ್ ತೀವ್ರತೆಗೆ ಬಾಟಲಿಯ ಮುಚ್ಚಳ ಮೇಲಕ್ಕೆ ಚಿಮ್ಮಿ ಮದ್ಯ ಎಲ್ಲೆಡೆ ಚೆಲ್ಲಿದೆ. ತಕ್ಷಣ ಸಹಪಾಠಿಗಳು ಶಿಕ್ಷಕರಿಗೆ ಈ ಮಾಹಿತಿ ನೀಡಿದ್ದು, ಅವರು ಬರುವಷ್ಟರಲ್ಲಿ ಈತ ಮನೆಗೆ ಎಸ್ಕೇಪ್ ಆಗಿದ್ದಾನೆ. ಮನೆಗೆ ತೆರಳಿದ ಶಿಕ್ಷಕರು ಪೋಷಕರಿಗೆ ಈ ಮಾಹಿತಿ ನೀಡಿ, ಬುದ್ದಿವಾದ ಹೇಳಲು ತಿಳಿಸಿದ್ದಾರೆ.
ಇತ್ತ ‘ಮದ್ಯ’ ಘಟನೆಗೆ ಅಬಕಾರಿ ಇಲಾಖೆ ಮಧ್ಯ ಪ್ರವೇಶಿಸಿದ್ದು, ಇಲಾಖಾ ವತಿಯಿಂದ ಕೌನ್ಸಿಲಿಂಗ್ ನೀಡಲು ನಿರ್ಧರಿಸಿದೆ