ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸೂಪರ್ಸ್ಟಾರ್ ಆಲಿಯಾ ಭಟ್ ರಾಹಾ ಹುಟ್ಟಿದ ನಂತರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಅದಾದ ನಂತರ ಯಾವುದೇ ಸಿನಿಮಾಗಳನ್ನು ಆಲಿಯಾ ಒಪ್ಪಿಕೊಂಡಿಲ್ಲ. ಇದೀಗ ಆಲಿಯಾ ಭಟ್ ಯಶ್ ರಾಜ್ ಫಿಲ್ಮ್ಸ್ ಜೊತೆ ಕೈ ಜೋಡಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇದರಲ್ಲಿ ಆಲಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸುತ್ತಿದ್ದು, ಸ್ಪೈ ಏಜೆಂಟ್ನ ಪಾತ್ರ ವಹಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಹಿಟ್ ಆಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.