ಡೆಲಿವರಿ ಬಾಯ್‌ಗಳೆಲ್ಲ ಲಿಫ್ಟ್‌ ಬಳಸುವಂತಿಲ್ಲ: ಮಂತ್ರಿ ಮಾಲ್‌ನಲ್ಲಿ ವಿಚಿತ್ರ ರೂಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನ ಪ್ರಸಿದ್ಧ ಮಂತ್ರಿ ಮಾಲ್‌ನಲ್ಲಿ ಸ್ವಿಗ್ಗಿ  ಹಾಗೂ ಝೊಮ್ಯಾಟೊ ಡೆಲಿವರಿ ಬಾಯ್‌ಗಳು ಲಿಫ್ಟ್‌ ಬಳಸುವಂತಿಲ್ಲ!

ಹೌದು, ಈ ಹಿಂದೆ ಬೆಂಗಳೂರಿನ ಮಾಲ್‌ಗಳಲ್ಲಿ ರೈತರಿಗೆ ಪಂಚೆ ಧರಿಸಿದ ಕಾರಣಕ್ಕೆ ಎಂಟ್ರಿ ನೀಡುತ್ತಿರಲಿಲ್ಲ. ಇದೀಗ ನಾಲ್ಕೈದು ಫ್ಲೋರ್‌ ಇರುವ ಮಾಲ್‌ನಲ್ಲಿ ಡೆಲಿವರಿ ಬಾಯ್‌ಗಳು ಲಿಫ್ಟ್‌ ಹತ್ತುವಂತಿಲ್ಲ ಎನ್ನಲಾಗಿದೆ.

ನಮ್ಮ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಡೆಲಿವರಿ ಬಾಯ್‌ ಒಬ್ಬರಿಗೆ ಅಪಮಾನ ಮಾಡಲಾಗಿದೆ. ಹೌದು ಇಲ್ಲಿನ ಸಿಬ್ಬಂದಿಗಳು ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಅನ್ನು ಬಳಸಂಗಿಲ್ಲ ಎಂದು ತಾಕೀತು ಮಾಡಿದ್ದಾರೆ. ಇವರ ಈ ದುರಹಂಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತ ವಿಡಿಯೋವನ್ನು ಚೇತನ್‌ ಸೂರ್ಯ ಎಸ್‌ (Chethan_Surya_S) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದೆಂಥ ಅಸ್ಪೃಶ್ಯತೆ? ಅಂದು ಪಂಚೆ ತೊಟ್ಟು ಬಂದ ರೈತನನ್ನು ಒಳ ಬಿಡದೇ ಅವಮಾನ ಮಾಡಿದ ಪ್ರಕರಣ ಮಾಸುವ ಮುನ್ನವೇ, ಇಂದು ಡೆಲಿವರಿ ಹುಡುಗರಿಗೆ ಮಂತ್ರಿಮಾಲ್‌ ಅಪಮಾನ ಮಾಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಬಳಸಬಾರದೆಂದು ಅವಮಾನ ಮಾಡುವಂತಹ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಅವರಿಗೂ ಕೂಡಾ ಲಿಫ್ಟ್‌ ಒಳಗೆ ಬಿಡಬೇಕು, ಯಾಕೆ ಮಾನವ ಹಕ್ಕು ಉಲ್ಲಂಘನೆ ಮಾಡ್ತಿರಾ ಎಂದು ಡೆಲಿವರಿ ಬಾಯ್‌ ಪರ ಮಾತನಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!