ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಪ್ರಣೊಯ್ ಸೋಲು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಎಚ್.ಎಸ್. ಪ್ರಣೊಯ್ ಪುರುಷರ ಸಿಂಗಲ್ಸ್‌ನಲ್ಲಿ ಸೋಲು ಕಂಡಿದ್ದಾರೆ.
ಥೈಲೆಂಡಿನ ಕುನ್ಲವುಟ್ ವಿಟಿಡ್‌ಸರ್ನ್ ಅವರು ಪ್ರಣೊಯ್‌ರನ್ನು 21-15, 24-22 ಸೆಟ್‌ಗಳಿಂದ ಸೋಲಿಸಿದರು. ಕಳೆದ ವಾರವಷ್ಟೇ ವಿಟಿಡ್‌ಸರ್ನ್ ಜರ್ಮನ್ ಓಪನ್‌ನಲ್ಲಿ ಲಕ್ಷ್ಯ ಸೇನ್‌ರನ್ನು ಫೈನಲಿನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.
ಮೊದಲ ಸೆಟ್‌ನಲ್ಲಿ ಪ್ರಣೊಯ್ ಸುಲಭದಲ್ಲಿ ಸೋತರಾದರೂ, ಎರಡನೇ ಸೆಟ್‌ನಲ್ಲಿ ತೀವ್ರ ಹೋರಾಟ ನೀಡಿದರು. ಕೊನೆಗೂ ಅವರು 24-22 ರಿಂದ ಮಣಿಯಬೇಕಾಯಿತು.
ಡಬಲ್ಸ್‌ನಲ್ಲಿ ಅರ್ಜುನ್ ಮತ್ತು ಧ್ರುವ್ ಕಪಿಲಾ ಜೋಡಿಯು ಇಂಡೋನೇಶಿಯಾದ ಅನುಭವಿ ಆಟಗಾರರಾದ ಮೊಹ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿವಾನ್ ವಿರುದ್ಧ ಸೋಲು ಕಂಡಿತು.
ಮೊದಲ ಸೆಟ್‌ನ್ನು ಭಾರತೀಯ ಜೋಡಿಯು 21-15ರಿಂದ ಗೆದ್ದಿತು. ಆದರೆ ಎರಡನೇ ಸೆಟ್‌ನಲ್ಲಿ ಇಂಡೋನೇಶಿಯಾದ ಜೋಡಿಯು 21-12ರ ಜಯ ಸಾಸಿತು. ಮೂರನೇ ನಿರ್ಣಾಯಕ ಸೆಟ್‌ನಲ್ಲಿ ಕೂಡ ಭಾರತೀಯರು 18-21 ಅಂತರದ ಸೋಲು ಅನುಭವಿಸಿದರು.
21 ವರ್ಷಗಳಿಂದ ಭಾರತವು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನಲ್ಲಿ ಪ್ರಶಸ್ತಿ ಗೆದ್ದುದಿಲ್ಲ. ಪ್ರಕಾಶ್ ಪಡುಕೋಣೆ 1980ರಲ್ಲಿ ಮತ್ತು ಪಿ. ಗೋಪಿಚಂದ್ 2001ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಸೈನಾ ನೆಹ್ವಾಲ್ 2015ರಲ್ಲಿ ಫೈನಲಿಗೆ ತಲುಪಿದ್ದರೂ ಅಲ್ಲಿ ಸೋತಿದ್ದರು. ಈ ಬಾರಿ ಹಲವು ಪ್ರಮುಖ ಭಾರತೀಯ ಆಟಗಾರರು ರ್ಸ್ಪಸುತ್ತಿರುವುದರಿಂದ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ ಭಾರತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!