Sunday, December 3, 2023

Latest Posts

ಸರ್ಕಾರದಲ್ಲಿ ಎಲ್ಲವೂ ಸರಿಯಿದೆ: ಶಾಮನೂರು ಶಿವಶಂಕರಪ್ಪ ಯೂಟರ್ನ್

ಹೊಸದಿಗಂತ ವರದಿ,ವಿಜಯಪುರ:

ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ, ಸರಿ ಇಲ್ಲ ಎಂದು ಯಾರು ಹೇಳುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಯೂಟರ್ನ್ ಹೊಡೆದಿದ್ದಾರೆ.

ಲಿಂಗಾಯತ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಕ್ಕೆ ನಿಯೋಜಿಸುತ್ತಿಲ್ಲ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಆಯಕಟ್ಟಿನ ಸ್ಥಾನ ಇಲ್ಲ ಎಂಬ ವಿಚಾರ ಪ್ರಸ್ತಾಪಿಸಿದ್ದೇ, ಆದರೆ ಅದನ್ನೇ ವರ್ಷಪೂರ್ತಿ ಕಂಟಿನ್ಯೂ ಮಾಡಲು ಆಗುತ್ತದೆಯೇ ? ಈ ವಿಷಯವನ್ನೂ ಸರ್ಕಾರದವರು ಸರಿ ಮಾಡಿಕೊಂಡು ಹೋಗುತ್ತಾರೆ ಎಂದರು.

ಸಚಿವ ಸತೀಶ ಜಾರಕಿಹೊಳಿ ಬಂಡಾಯ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೆ ಯಾವುದೇ ಬಂಡಾಯ ಗೊತ್ತಿಲ್ಲ, ಯಾರು ಬಂಡಾಯ ಏಳುವುದಿಲ್ಲ, ಯಾರೂ ಎಲ್ಲೂ ಹೋಗುವುದಿಲ್ಲ, ಎಲ್ಲರೂ ಸರಿಯಾಗಿರುತ್ತಾರೆ ಎಂದರು.

ಎರಡೂ ವರ್ಷಗಳ ಬಳಿಕ ಸಚಿವ ಸಂಪುಟ ಪುನಾರಚನೆ ಆಗಲಿದೆ ರಾಮದುರ್ಗ ಶಾಸಕ ಅಶೋಕ ಪಟ್ಟಣ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲ ಇಮೇಜ್, ಕನಸು ಎಂದು ಅವರು ಮುಂದಿನ ಸಿಎಂ ಡಿ.ಕೆ. ಶಿವಕುಮಾರ ಎಂದು ಕೆಲ ಶಾಸಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮುಂದೆ ಬಂದದ್ದು ನೋಡೋಣ ಈಗೇಕೆ ಎಂದು ಪ್ರಶ್ನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!