ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಬಹುತೇಕ ಎಲ್ಲರೂ ಭೇಟಿ ನೀಡುತ್ತಿದ್ದು, ಅದೇ ರೀತಿ ನಟಿ ಮಾಡೆಲ್ ಪೂನಾಂ ಪಾಂಡೆ ಕೂಡ ಗಂಗೆಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದು ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಗಂಗೆಯಲ್ಲಿ ಮುಳುಗೆದ್ದ ಈಕೆ ನಾನು ಮಾಡಿದ ಪಾಪವೆಲ್ಲಾ ತೊಳೆದು ಹೋಯ್ತು ಎಂದು ಬರೆದುಕೊಂಡಿದ್ದಾರೆ. ಈಕೆಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
ಮಾಡೆಲ್ ಆಗಿ ಕೆರಿಯರ್ ಆರಂಭಿಸಿದ ಪೂನಂ ಪಾಂಡೆ ‘ನಶಾ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಆಕೆ ಫೇಮಸ್ ಆಗಿರುವುದು ಸಾಮಾಜಿಕ ಜಾಲತಾಣಗಳಿಂದಾಗಿ ಸದಾ ಅರೆಬರೆ ಬಟ್ಟೆ ಧರಿಸುವ ಆಕೆ ಸಾಮಾಜಿಕ ಜಾಲತಾಣಗಳಲ್ಲೂ ಈ ಅರೆಬೆತ್ತಲೆ ಫೋಟೋಗಳನ್ನೇ ಹಾಕುವ ಕಾರಣಕ್ಕೆ ಸಾಕಷ್ಟು ಫೇಮಸ್ ಆಗಿದ್ದಾಳೆ.
ಪೂನಾಂ ಪಾಂಡೆ ನಿನ್ನೆಯ ಮೌನಿ ಅಮವಾಸ್ಯೆ ದಿನವೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ತೆರಳಿ ಗಂಗೆಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದ್ದಾಳೆ. ಇದರ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆಕೆ ನನ್ನ ಪಾಪಗಳೆಲ್ಲ ತೊಳೆದು ಹೋದವು ಎಂದು ಬರೆದುಕೊಂಡಿದ್ದಾಳೆ.
ಈ ಪೋಸ್ಟ್‌ಗೆ ಅನೇಕರು ದೇಹ ತೊಳೆದರೆ ಸಾಲದು ಮನಸ್ಸನ್ನು ತೊಳೆಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಪಾಪವನ್ನು ತೊಳೆಯುವುದು ಇಷ್ಟು ಸುಲಭವಾಗಿದ್ದರ ಮನುಷ್ಯ ದಿನವೂ ಪಾಪ ಮಾಡಿ ಇಲ್ಲಿ ಬಂದು ಸ್ನಾನ ಮಾಡುತ್ತಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀನು ಪುಣ್ಯಸ್ನಾನ ಮಾಡಿ ಏನು ಪ್ರಯೋಜನ ಮತ್ತದೇ ಪಾಪ ಮಾಡುವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈಕೆಯ ವೀಡಿಯೋ ಫೋಟೋಗಳಿಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿದೆ.