ಅಕ್ಟೋಬರ್ 10ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್: ವಾಟಾಳ್ ನಾಗರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನವರು ಬಹಳ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತೆ, ಕೆಆರ್​ಎಸ್​(KRS)ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು, ಇಷ್ಟು ಬಂತು ಎಂದು ಅದೇನೋ ಹೇಳ್ತಾರೆ ಪಾಪ, ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು, ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡುತ್ತಾರೆ. ಬೇಕಾದರೆ, ತಮಿಳುನಾಡಿನ ಜನರು ಮಾರುವೇಶದಲ್ಲಿ ಬಂದು ಕೆಆರ್​ಎಸ್​ ರೌಂಡ್ ಹಾಕಿಕೊಂಡು ಹೋಗಲಿ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj) ಹೇಳಿದರು.

ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದ್ದು, ಅರ್ಜಿ ಏನಾಯ್ತು? ಅಲ್ಲಿಯವರೆಗೆ ನೀರು ಏನಾಗ್ತಿದೆ ಎಂಬುದರ ಕುರಿತು ಸತ್ಯ ಬೇಕು. ಈ ಹಿನ್ನಲೆ ಅಕ್ಟೋಬರ್ 10ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಧರಣಿ ಮಾಡುತ್ತೇವೆ ಎಂದರು.

ನಾನು ತಮಿಳುನಾಡಿಗೆ ಗಂಭೀರವಾಗಿ ಹೇಳ್ತಿನಿ, ರಾಜಕೀಯ ಮಾಡ್ತಿದ್ದೀರ, ಅದು ಬೇಡ. ನಿಮ್ಮನ್ನ ನಾವು ಕೆಟ್ಟದಾಗಿ ನೋಡಬೇಕಾಗುತ್ತೆ. ಪಳನಿಸ್ವಾಮಿ ಕೂಡ ಬೀದಿಗೆ ಇಳಿದಿದ್ದಾರೆ. ಇದನ್ನ ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!