I.N.D.I.A ಮೈತ್ರಿಗೆ ಬರಲು ಇಚ್ಚಿಸುವ ರಾಜಕೀಯ ಪಕ್ಷಗಳಿಗೆ ಸ್ವಾಗತ: ಮುಕ್ತ ಆಹ್ವಾನ ಕೊಟ್ಟ ಖರ್ಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ I.N.D.I.A ಮೈತ್ರಿಕೂಟ ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಸಭೆ ನಡೆಸಿದ್ದು, ಈ ವೇಳೆ I.N.D.I.A ಮೈತ್ರಿಗೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಸೇರ್ಪಡೆಗೊಳ್ಳಬಹುದು ಎನ್ನುವ ಮುಕ್ತ ಆಹ್ವಾನವನ್ನು ಮಲ್ಲಿಕಾರ್ಜುನ್‌ ಖರ್ಗೆ ನೀಡಿದ್ದಾರೆ.

ನಾವು ತುಂಬಾ ಚೆನ್ನಾಗಿ ಮತ್ತು ಒಗ್ಗಟ್ಟಿನಿಂದ ಹೋರಾಡಿದ್ದೇವೆ . ಸಂವಿಧಾನದಲ್ಲಿ ಬರೆದಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಗೌರವಿಸುವ ಎಲ್ಲ ಪಕ್ಷಗಳನ್ನು I.N.D.I.A ಅಲೈಯನ್ಸ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಎನ್‌ಸಿಪಿ (ಎಸ್‌ಸಿಪಿ) ನ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ, ಶಿವಸೇನೆಯ (ಉದ್ಧವ್ ಬಣ) ಸಂಜಯ್ ರಾವುತ್, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಆರ್‌ಜೆಡಿಯ ತೇಜಸ್ವಿ ಯಾದವ್, ಡಿಎಂಕೆ ಸೇರಿದಂತೆ ಹಲವು ನಾಯಕರು ನಾಯಕ ಎಂಕೆ ಸ್ಟಾಲಿನ್, ಜಾರ್ಖಂಡ್ ಸಿಎಂ ಚಂಪೈ ಸೊರೆನ್ ಮತ್ತು ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ, ಎಎಪಿ ನಾಯಕ ರಾಘವ್ ಚಡ್ಡಾ ಮತ್ತು ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!