ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಕಾಲ ಇನ್ನೂ ಮುಗಿದಿಲ್ಲ. ರಶ್ಮಿಕಾ ಇತ್ತೀಚೆಗಷ್ಟೇ ಶಾರುಖ್ ಖಾನ್ ಜೊತೆ ಜಾಹೀರಾತೊಂದನ್ನು ಶೂಟ್ ಮಾಡಿದ್ದಾರೆ.
ಇದೀಗ ರಶ್ಮಿಕಾಗೆ ಬಂಪರ್ ಆಫರ್ ಸಿಕ್ಕಿದ್ದು, ತಮಿಳಿನ ಖ್ಯಾತ ನಟ ವಿಕ್ರಂಗೆ ನಾಯಕಿಯಾಗಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ರಶ್ಮಿಕಾ ಜೊತೆ ವಿಜಯ್ ಸೇತುಪತಿ ಕೂಡ ತೆರೆ ಹಂಚಿಕೊಳ್ಳಲಿದ್ದಾರಂತೆ. ಮೂವರ ಪಾತ್ರಕ್ಕೂ ಸ್ಕೋಪ್ ಇದ್ದು, ಹೊಸ ಜಾನರ್ ಕತೆ ಇದಾಗಿರಲಿದೆ ಎನ್ನುವ ಮಾಹಿತಿ ದೊರಕಿದೆ.
ಯಾವ ಸಿನಿಮಾ, ನಿರ್ದೇಶಕರು ಯಾರು ಎನ್ನುವ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.