ಈ ಕಣ್ಣುಗಳ ಹೊಳಪಿಗೆ ಪ್ರಪಂಚದ ಎಲ್ಲಾ ಸಂಪತ್ತು ಶೂನ್ಯ: ಮೊಮ್ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಅದಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಅದಾನಿ ಗ್ರೂಪ್‌ನ ಚೇರ್ಮನ್‌ ಗೌತಮ್‌ ಅದಾನಿ ತಮ್ಮ ವ್ಯವಹಾರದ ಜೀವನದಲ್ಲಿ ಸದಾ ಬ್ಯುಸಿ ಇರುತ್ತಾರೆ. ಸದಾ ಒತ್ತಡದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ.

ಇದರ ನಡುವೆ ಮಂಗಳವಾರ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ತಮ್ಮ ಮೊಮ್ಮಗಳ ಬಗ್ಗೆ ಮಾತನಾಡಿದ್ದಾರೆ.

‘ವಿಶ್ವದ ಅದೇನೇ ಸಂಪತ್ತುಗಳಿದ್ದರೂ, ನನ್ನ ಮೊಮ್ಮಕ್ಕಳ ಕಣ್ಣಿನ ಹೊಳಪಿನ ಮುಂದೆ ಅವವೆಲ್ಲವೂ ಶೂನ್ಯ’ ಎಂದು ಬರೆದುಕೊಂಡಿದ್ದಾರೆ.

ತಮ್ಮ ಎಕ್ಸ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ಗೌತಮ್‌ ಅದಾನಿ, ಪುತ್ರ ಕರಣ್‌ ಅದಾನಿ ಹಾಗೂ ಅವರ ಪತ್ನಿ ಪರಿಧಿ ಅವರ ಮೂರನೇ ಹೆಣ್ಣುಮಗಳು 14 ತಿಂಗಳ ಕಾವೇರಿಯನ್ನು ಎತ್ತಿಕೊಂಡಿರುವ ಚಿತ್ರದೊಂದಿಗೆ ಈ ಮಾತನ್ನು ಪೋಸ್ಟ್‌ ಮಾಡಿದ್ದಾರೆ.

ಮೊಮ್ಮಗಳ ಚಿತ್ರವನ್ನು ಹಂಚಿಕೊಂಡ ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ, ಈ ಕಣ್ಣುಗಳ ಹೊಳಪಿಗೆ ಹೋಲಿಸಿದರೆ ಪ್ರಪಂಚದ ಎಲ್ಲಾ ಸಂಪತ್ತು ಶೂನ್ಯ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್‌ ಅದಾನಿ, ನನಗೆ ನನ್ನ ಮೂರು ಜನ ಮೊಮ್ಮಕ್ಕಳೇ ಎಲ್ಲಾ ಒತ್ತಡವನ್ನು ನಿವಾರಿಸುವ ಶಕ್ತಿ ಎಂದು ಹೇಳಿದ್ದರು. ಮೂರು ಜನ ಮೊಮ್ಮಗಳ ಜೊತೆ ಸಮಯ ಕಳೆಯುತ್ತಿದ್ದರೆ, ನನ್ನ ಎಲ್ಲಾ ಒತ್ತಡ ನಿವಾರಣೆ ಆಗುತ್ತದೆ ಎಂದಿದ್ದರು.

ನಾನು ನನ್ನ ಮೊಮ್ಮಗಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಅವರು ನನ್ನ ದೊಡ್ಡ ಒತ್ತಡ ಕಡಿಮೆ ಮಾಡುತ್ತಾರೆ.. ನನಗೆ ಕೇವಲ ಎರಡು ಪ್ರಪಂಚಗಳಿವೆ: ಕೆಲಸ ಮತ್ತು ಕುಟುಂಬ. ನನಗೆ ಕುಟುಂಬವು ಶಕ್ತಿಯ ಮೂಲವಾಗಿದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!