ಮಕ್ಕಳಿಗೆ ಹಲ್ಲು ಬರುವ ಮುನ್ನ ಈ ಎಲ್ಲಾ ಲಕ್ಷಣಗಳು ಕಾಣುತ್ತವೆ..

ಹಲ್ಲು ಬರುವ ಸಮಯ ಹಾಗೂ ರೀತಿ ಪ್ರತೀ ಮಕ್ಕಳಿಗೂ ವಿಭಿನ್ನವಾಗಿ ಇರುತ್ತದೆ. ಒಂದು ವರ್ಷದೊಳಗೆ ಸಾಮಾನ್ಯ ಎಲ್ಲ ಮಕ್ಕಳಿಗೂ ಹಾಲುಹಲ್ಲು ಬರುತ್ತದೆ. ನಾಲ್ಕು ತಿಂಗಳಿನಿಂದ ಒಂದು ವರ್ಷದೊಳಗೆ ಯಾವ ಸಮಯಕ್ಕಾದರೂ ಹಲ್ಲು ಬರಬಹುದು.

  • ಹಲ್ಲು ಬರುವ ಮುನ್ನ ಈ ಎಲ್ಲ ಲಕ್ಷಣಗಳು ಕಾಣುತ್ತವೆ

    ಒಸಡುಗಳು ಕೆಂಪಾಗಿರುತ್ತವೆ
    ಮೈ ಬಿಸಿಯಾಗಿ ಇರುತ್ತದೆ
    ಒಂದು ಕೆನ್ನೆ ಊದಿದ ಹಾಗೆ ಇರುತ್ತದೆ
    ಮುಖದ ಮೇಲೆ ರ‍್ಯಾಶಸ್ ಕಾಣಿಸುತ್ತದೆ
    ಕಿವಿಯನ್ನು ಕೆರೆದುಕೊಳ್ಳುತ್ತಾರೆ
    ಹೆಚ್ಚು ಜೊಲ್ಲು ಸುರಿಸುತ್ತಾರೆ
    ಸಿಕ್ಕ ವಸ್ತುಗಳನ್ನೆಲ್ಲಾ ತಿನ್ನಲು ಯತ್ನಿಸುತ್ತಾರೆ
    ಎಲ್ಲ ವಿಷಯಕ್ಕೂ ಕಿರಿಕಿರಿ ಮಾಡುತ್ತಾರೆ
    ನಿದ್ದೆ ಮಾಡುವುದಿಲ್ಲ
    ಯಾವಾಗಲೂ ಅಳುವುದು, ಆಗಾಗ ಕೆಮ್ಮು ಬರುವುದು
    ಕೈ ಬೆರಳುಗಳನ್ನು ಬಾಯಿಗೆ ಹಾಕಿ ಕಚ್ಚುವುದು
  • ಏನು ನೀಡಬಹುದು?
    ತಣ್ಣಗಿರುವ ಪ್ಯಾಸಿಫೈಯರ್
    ಸ್ಪೂನ್
    ತಣ್ಣೀರ ಬಟ್ಟೆ
    ಫ್ರಿಡ್ಜ್‌ನಲ್ಲಿಟ್ಟ ಟೀತಿಂಗ್ ಗೊಂಬೆಗಳಿ
    ತಣ್ಣಗಿರುವ ನೀರನ್ನು ಬಾಟಲಿಯಲ್ಲಿ ಹಾಕಿ ಕೊಡಬಹುದು
    ಕೈಯನ್ನು ಚೆನ್ನಾಗಿ ತೊಳೆದು, ತಣ್ಣೀರಿನಲ್ಲಿ ಕೈ ಎದ್ದಿ ಮಕ್ಕಳ ಬಾಯಲ್ಲಿ ಇಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!