ಮಾದಕ ವಸ್ತು ಮಾರಾಟ, ಬಳಕೆ ಆರೋಪ: ಕೊಡಗು ಪೊಲೀಸರಿಂದ 25 ಮಂದಿಯ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಆರೋಪದಡಿ ಮಂಗಳೂರಿನ 14 ಮಂದಿಯ ಸಹಿತ 25 ಮಂದಿಯನ್ನು ಕೊಡಗು ಜಿಲ್ಲಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಎಚಿಸಲಾದ ವಿಶೇಷ ತಂಡಗಳು‌ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ 25 ಮಂದಿಯನ್ನು ಬಂಧಿಸಿವೆ.

ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಂಡಬಾಣೆ ರಸ್ತೆ ಜಂಕ್ಷನ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಮೈಸೂರು ಉದಯಗಿರಿ ನಿವಾಸಿಯಾದ ಅಲಿಂ ಅಹಮ್ಮದ್ (36) ಮಡಿಕೇರಿ ಹಿಲ್ ರಸ್ತೆ ನಿವಾಸಿ ಮೋಸಿನ್.ಎಂ.ಐ (45) ಎಂಬವರನ್ನು 728 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ನಗರದ ಮಹಿಳಾ ಸಮಾಜದ ಬಳಿ ನಿಷೇಧಿತ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಡಿಕೇರಿ ನಿವಾಸಿಗಳಾದ ಸಾಗರ್.ಎಂ.ಎ(22), ರಹಮಾನ್.ಎಂ.ಎಸ್ (31) ಚೇತನ್.ಕೆ (23) ಎಂಬವರನ್ನು ಬಂಧಿಸಲಾಗಿದೆ.

ಮಡಿಕೇರಿಯ ಪ್ರವಾಸಕ್ಕಾಗಿ ಆಗಮಿಸಿ ಮಕ್ಕಂದೂರು ಗ್ರಾಮದ ಹೋಂ ಸ್ಟೇಯೊಂದರಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಸೆನ್ ಪೊಲೀಸ್ ಠಾಣೆಯ ಪೊಲೀಸರು ಮಂಗಳೂರಿನ ನಿವಾಸಿಗಳಾದ ರಿತಿಕ್ (23) ವಿಶ್ಲೇಶ್ ಅಜಿತ್ ಅಂಚನ್ ( 21 ) ಸುಮನ್ ಹರ್ಷಿತ್ (26), ಚಿರಾಗ್ ಸನಿಲ್ (24) ಮಂಜುನಾಥ್ (30) ಲತೀಶ್ ನಾಯಕ್ (32) ಸಚಿನ್ (26) ರಾಹುಲ್ (26) ಪ್ರಜ್ವಲ್ ( 32), ಅವಿನಾಶ್( 28), ಪ್ರತಿಕ್ ಕುಮಾರ್( 27) ಧನುಷ್ (28 ) ರಾಜೇಶ್, (45) ದಿಲ್ ರಾಜು (30) ಹಾಗೂ ಮಡಿಕೇರಿ ನಿವಾಸಿಗಳಾದ ಹೋಂಸ್ಟೇ ಮಧ್ಯವರ್ತಿ ಗಣೇಶ ಬಿ, (47) ಹೋಂ ಸ್ಟೇ ಮಾಲಕ ಸದಾಶಿವ ಬಿ.ಹೆಚ್(31 ವರ್ಷ) ಎಂಬುವರನ್ನು 414 ಗ್ರಾಂ ಗಾಂಜಾ ಮತ್ತು 9 ಎಲ್ ಎಸ್ ಡಿ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಯ್ಯನಕೋಟೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಸಿದ್ದಾಪುರ ಪೊಲೀಸರು ಚೆನ್ನಯ್ಯನಕೋಟೆ ನಿವಾಸಿಯಾದ ಇಮ್ರಾನ್ (31) ಎಂಬಾತನನ್ನು 190 ಗ್ರಾಂ ಗಾಂಜಾ ಸಹಿತ ಬಂಧಿಸಲಾಗಿದೆ.

ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ಕಾಲೇಜು ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಗೋಣಿಕೊಪ್ಪ ಪೊಲೀಸರು, ಗೋಣಿಕೊಪ್ಪ ನಿವಾಸಿಗಳಾದ ಎಂ.ಎಂ.ಶಮೀರ್ (37) ಎಂ ಜಬ್ಬಾರ್, (23 ) ನಿಸಾರ್ (37 ) ಎಂಬುವವರನ್ನು ಬಂಧಿಸಿ 370 ಗ್ರಾಂ ಗಾಂಜಾ ವಶಪಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಒಟ್ಟು 1 ಕೆ.ಜಿ 702 ಗ್ರಾಂ. ಗಾಂಜಾ ಹಾಗೂ 9 ಎಲ್ ಎಸ್ ಡಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಡೆಸುತ್ತಿರುವ ಹೋಂಸ್ಪೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ಪ್ರವಾಸದ ನಿಮಿತ್ತ ತಂಗಲು ಬರುವ ಪ್ರವಾಸಿಗರು ಮಾದಕ ವಸ್ತುಗಳನ್ನು ಮಾರಾಟ/ಬಳಕೆ ಮಾಡುವುದು ಕಂಡುಬಂದಲ್ಲಿ ಹೋ ಸ್ಪೇ/ರೆಸಾರ್ಟ್/ಲಾಡ್ಜ್’ಗಳ ಮಾಲಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಮಾಹಿತಿ ನೀಡದೇ ಮಾದಕ ವಸ್ತುಗಳನ್ನು ಮಾರಾಟ/ಬಳಕೆ ಮಾಡುವುದು ಕಂಡುಬಂದಲ್ಲಿ ಹೋಂ ಸ್ಪೇ/ರೆಸಾರ್ಟ್/ಲಾಡ್ಜ್’ಗಳ ಮಾಲಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಕಲಂ: 25 ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!