Sunday, February 5, 2023

Latest Posts

ಕ್ರಿಸ್‌ಮಸ್ ನೆಪದಲ್ಲಿ ಬಲವಂತದ ಮತಾಂತರ ಆರೋಪ: ದೊಣ್ಣೆ ಹಿಡಿದು ದಾಳಿ ನಡೆಸಿದ ಗುಂಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕ್ರಿಸ್ಮಸ್ ಆಚರಣೆ ನೆಪದಲ್ಲಿ ಹಿಂದೂಗಳನ್ನು ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು 30 ಯುವಕರ ಗುಂಪೊಂದು ಹಬ್ಬದ ಆಚರಣೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೊಲಾ ಗ್ರಾಮದಲ್ಲಿ ನಡೆದಿದೆ.
ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದವರ ಮೇಲೆ ಹಿಂದೂ ಸಂಘಟನೆಯ ಯುವಕರ ಗುಂಪು ದೊಣ್ಣೆ ಹಿಡಿದು ದಾಳಿ ನಡೆಸಿದೆ. ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಹಾಗೂ ಅವರ ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಾಂತರ ವಿರೋಧಿ ಕಾನೂನಿಗೆ ಇತ್ತೀಚೆಗೆ ಉತ್ತರಾಖಂಡ ಸಮ್ಮತಿ ನೀಡಿದೆ. ಅಲ್ಲಿ ಕಾನೂನುಬಾಹಿರ ಮತಾಂತರಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹ ಮತ್ತು ಜಾಮೀನು ರಹಿತ ಅಪರಾಧವನ್ನಾಗಿ ಮಾಡಲಾಗಿದೆ. ಈ ಮಸೂದೆಯನ್ನು ಈ ವರ್ಷದ ನವೆಂಬರ್ 30 ರಂದು ರಾಜ್ಯ ವಿಧಾನಸಭೆ ಅಂಗೀಕರಿಸಿತು ಮತ್ತು ರಾಜ್ಯಪಾಲರು ಈ ವಾರದ ಆರಂಭದಲ್ಲಿ ಶಾಸನಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!