ಹೊಸದಿಗಂತ ವರದಿ, ಬಳ್ಳಾರಿ:
ಜೀವ ಬೆದರಿಕೆ ಹಾಕಿದ್ದಾರೆ ಎನ್ನುದು ಶುದ್ಧ ಸುಳ್ಳು, ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ಪರಿಸರ, ಜೀವಶಾಸ್ತ್ರ, ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಹೇಳಿದರು.
ಈ ಕುರಿತು ಹೇಳಿಕೆ ನೀಡಿದ ಅವರು, ಜೀವ ಬೆದರಿಕೆ, ಕೊಲೆ ಬೆದರಿಕೆ, ದೌರ್ಜನ್ಯ, ದರ್ಪ ಎನ್ನುವ ಪದಗಳೇ ನನ್ನಲ್ಲಿಲ್ಲ, ಹೀಗುರುವಾಗ ನನ್ನ ವಿರುದ್ಧ ಇಂತಹ ಸುಳ್ಳು ಆರೋಪ ಹೊರೆಸಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇಲ್ಲಿವರೆಗೂ ಯಾರೋಬ್ಬರಿಗೂ ತೊಂದರೆ ಎದುರಾಗಿಲ್ಲ, ಬೇಸರವಾಗುವ ರೀತಿಯಲ್ಲೂ ನಡೆದುಕೊಂಡಿಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದೇನೆ, ಬೆದರಿಕೆ, ಕೊಲೆ ಬೆದರಿಕೆ, ದೌರ್ಜನ್ಯಗಳು ಎನ್ನುವ ಶಬ್ದಗಳೇ ನಮ್ಮ ಕುಟುಂಬ ನಮ್ಮದಲ್ಲಿಲ್ಲ, ಅಂತಹ ಒಳ್ಳೆಯ ಮನೆತನ ನಮ್ಮದು, ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ ಅಭಿವೃದ್ಧಿಯ ವೇಗ ಪ್ರಾರಂಭವಾಗಿದೆ. ಆಗದೇ ಇರುವ ಕೆಲವರು ಇಂತಹ ಸಮಸ್ಯೆ ತಂದಿಟ್ಟು, ನನಗೆ ಹಿನ್ನಡೆಯನ್ನುಂಟು ಮಾಡಬೇಕು ಎಂದುಕೊಂಡಿದ್ದಾರೆ, ಅವರ ಆಟ ನಡೆಯೋಲ್ಲ, ಜನರೊಂದಿಗೆ ಬೆರೆಯುವ ಸ್ವಭಾವ ನನ್ನದು, ಅವರ ಜೊತೆಯಲ್ಲೇ ಇದ್ದು, ವಿಜಯನಗರ ಸಾಮ್ರಾಜ್ಯದ ಅರಸರು ಆಳಿದ ನಾಡಲ್ಲಿ ಅಭಿವೃದ್ಧಿಯ ಕನಸನ್ನು ಕಟ್ಟಿಕೊಂಡಿರುವೆ, ಆಗದೇ ಇರುವ ಕೆಲವರು ಇದನ್ನು ಸೃಷ್ಟಿ ಮಾಡಿರಬಹುದು, ಅವರ ಆಟ ನಡೆಯೋಲ್ಲ, ತನಿಖೆ ನಡಿತಿದೆ, ನಂತರ ಸತ್ತಾಂಶ ಹೊರಬೀಳಲಿದೆ ಎಂದರು.
ಪ್ರಕರಣದ ಕುರಿತು ನನಗೆ ತಡವಾಗಿ ಮಾಹಿತಿ ಬಂದಿದೆ, ಕೂಡಲೇ ಪೊಲೀಸ್ ಅಧಿಕಾರಿಗಳೊಂದಿಗೆ ಚೆರ್ಚಿಸಿ, ಜಾತಿನಿಂದನೆ, ಜೀವ ಬೆದರಿಕೆ ಹಾಕಿರುವ ಕುರಿತು ತನಿಖೆ ನಡೆಸಿ, ನಾನು ಜೀವ ಬೆದರಿಕೆ ಹಾಕಿದ್ದರೇ, ಜಾತಿ ನಿಂದನೆ ಮಾಡಿದ್ದರೇ, ಕಾನೂನು ಕ್ರಮಕೈಗೊಳ್ಳಿ, ಯಾವುದೇ ಕಾರಣಕ್ಕೂ ಒತ್ತಡ ಹೇರೋಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿರುವೆ, ದೇಶದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ನಾನು ಕಾನೂನಿಗೆ ಗೌರವ ಕೊಡುವ ವ್ಯಕ್ತಿ ನಾನು, ಅದರ ಕೆಳಗಡೆ ಎಲ್ಲರೂ ಕೆಲಸ ಮಾಡಬೇಕು, ಪೊಲೀಸರು ತನಿಖೆ ನಡೆಸಲಿ, ನಂತರ ಸತ್ಯಾಂಶ ಹೊರ ಬರಲಿದೆ ಎಂದರು.
ನಮ್ಮ ಬೆಂಬಲಿಗರು ದೌರ್ಜನ್ಯ, ದಬ್ಬಾಳಿಕರತ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು, ಬರಿ ಆರೋಪ ಮಾಡುವುದು ಸುಲಭ, ಎಲ್ಲದಕ್ಕೂ ಸಾಕ್ಷಾಧಾರ ಮುಖ್ಯ, ಅಂತಹ ಒಂದು ಸಣ್ಣ ಪ್ರಕರಣದ ಬಗ್ಗೆ ಇದ್ದರೆ ತಿಳಿಸಿ, ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.