ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ಉಗುರು ಧರಿಸಿದ ಆರೋಪದಲ್ಲಿ ವರ್ತೂರು ಸಂತೋಷ್ ಬಂಧನದ ಬಳಿಕ ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರೋಪ ಕೇಳಿ ಬಂದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾನೇ ಇಂದು ಬೆಳಗ್ಗೆ 11 ಗಂಟೆಗೆ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದೆ. ನನ್ನ ಮಗ ನಿಖಿಲ್ ಕುಮಾರಸ್ವಾಮಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆ ಅನ್ನೋ ಆರೋಪದ ಬಗ್ಗೆ ಪರಿಶೀಲಿಸೋದಕ್ಕೆ ತಿಳಿಸಿದ್ದೆ. ಅದು ಹುಲಿ ಉಗುರು ಅಲ್ಲ. ನಕಲಿ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ಪುತ್ರ ನಿಖಿಲ್ ಧರಿಸಿದ್ದು ಹುಲಿ ಉಗುರು ಅಲ್ಲ. ಅವನು ಚಿನ್ನ ಧರಿಸೋದಕ್ಕೂ ಆಸೆ ಪಡೋದಿಲ್ಲ. ನಾನೇ ಅಧಿಕಾರಿಗಳ ಜೊತೆಗೆ ಚಿನ್ನಗ ಅಂಗಡಿಗೆ ಕಳಿಸಿದ್ದೇನೆ. ಅರಣ್ಯ ಇಲಾಖೆಯ ತನಿಖೆಗೆ ಸಂಪೂರ್ಣ ಸಹಕಾರವಿದೆ. ಕಾನೂನ ರಚನೆ ಮಾಡಿದವರು ನಾವು. ನಮಗೆ ಅರಿವಿಲ್ವ ಅಂತ ಹೇಳಿದರು.
ನನ್ನ ಮಗ ಧರಿಸಿದಂತ ಪೆಂಡೆಂಟ್ ಅನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದೇನೆ. ಅದನ್ನ ಎಫ್‌ಎಸ್‌ಎಲ್ ಗೆ ಕಳುಹಿಸಿ ಅದು ಅಸಲಿಯೋ ಅಥವಾ ನಕಲಿಯೋ ಅಂತ ಅದರಿಂದ ತಿಳಿದು ಬರಲಿ ಅಂದರು.