ಜಾಹೀರಾತಿನಲ್ಲಿ ತಪ್ಪು ಮಾಹಿತಿಯ ಆರೋಪ: ಪತಂಜಲಿಯ 5 ಔಷಧ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಬಾ ರಾಮ್‌ದೇವ್ ಅವರ ಪತಂಜಲಿಯಾ 5 ಔಷಧಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತರಖಂಡದಲ್ಲಿ ನಿಲ್ಲಿಸುವಂತೆ ಆದೇಶ ನೀದಲಾಗಿದೆ.

ಕೇರಳದ ನೇತ್ರ ತಜ್ಞ ಕೆ.ವಿ.ಬಾಬು ಸಲ್ಲಿಸಿದ ದೂರಿನ ಆಧಾರದಲ್ಲಿ ಇದೀಗ ಉತ್ತರಖಂಡದ ಆರ್ಯುವೇದ ಹಾಗೂ ಯೂನಾನಿ ಪರವಾನಗಿ ಪ್ರಾಧಿಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪತಂಜಲಿಯ 5 ಉತ್ಪನ್ನಗಳು ಜಾಹೀರಾತಿನಲ್ಲಿ ಹೇಳುವ ವಿಚಾರಕ್ಕೂ ಉತ್ಪನ್ನದಲ್ಲಿರುವ ಔಷಧಿ ಗುಣಗಳಿಗೆ ವ್ಯತ್ಯಾಸವಿದೆ. ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಪ್ರಾಧಿಕಾರ 5 ಉತ್ಪನ್ನಗಳನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದೆ.

ಪತಂಜಲಿಯ ಐದು ಔಷಧಿ ಉತ್ಪನ್ನವಾಗಿರುವ ಬಿಪಿ ಗ್ರಿಟ್, ಮಧುಗ್ರಿಟ್, ಥ್ಯೋರ್‌ಗ್ರಿಟ್, ಲಿಪಿಡೊಮ್, ಐಯ್‌ಗ್ರಿಟ್ ಗೋಲ್ಡ್ ಟ್ಯಾಬ್ಲೆಟ್ ನಿಷೇಧಿಸುವಂತೆ ಆದೇಶ ನೀಡಲಾಗಿದೆ. ಈ ಔಷಧಿಗಳು ಕ್ರಮವಾಗಿ ರಕ್ತದೊತ್ತಡ, ಮಧುಮೇಹ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ ನಿವಾರಿಸುತ್ತದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಜಾಹೀರಾತು ಹಾಗೂ ಉತ್ಪನ್ನದಲ್ಲಿ ವ್ಯತ್ಯಾಸವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಮತ್ತೆ ಮರುಕತೆಗೆ ಬರಲು ಪತಂಜಲಿಯ ಔಷಧಿಯನ್ನು ಉತ್ಪಾದಿಸುವ ದಿವ್ಯಾ ಫಾರ್ಮಸಿಗೆ ಕೆಲವು ಸೂಚನೆ ನೀಡಲಾಗಿದ್ದು, ಪತಂಜಲಿ ಈ ಉತ್ಪನ್ನಗಳ ಲೇಬಲ್, ಜಾಹೀರಾತು ಸೇರಿದಂತೆ ಎಲ್ಲವನ್ನೂ ಬದಲಾಯಿಸಿ ಮತ್ತೆ ಹೊಸದಾಗಿ ಔಷಧಿಯ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಬೇಕು. ಪರವಾನಗಿ ಸಿಕ್ಕ ಬಳಿಕವಷ್ಟೇ ಈ ಉತ್ಪನ್ನಗಳನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯ ಎಂದು ಪ್ರಾಧಿಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!