ಮೈತ್ರಿಗು ನಮಗೂ ಸಂಬಂಧವಿಲ್ಲ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಕಡೆ ಮಾತ್ರ ನಮ್ಮ ಗಮನ: ಕೆ.ಎನ್ ರಾಜಣ್ಣ

ಹೊಸದಿಗಂತ ವರದಿ,ಹಾಸನ:

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿದೆ. ಮೈತ್ರಿಗು ನಮಗೂ ಸಂಬಂಧವಿಲ್ಲ. ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ‌ ಕಡೆ ಮಾತ್ರ ಗಮನ ಹರಿಸಿದ್ದೇವೆ ಎಂದು ಸಚಿವ ಕೆ.ಎನ್ ಹೇಳಿದರು.

ನಗರದ ಪ್ರವಾಸಿಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮನ್ನು ಸೋಲಿಸುವ ಸಲುವಾಗಿ ಮೈತ್ರಿ ಮಾಡಿಕೊಂಡಿವೆ. ನಮಗೆ ಮೈತ್ರಿಯ ಬಗ್ಗೆ ಚಿಂತೆಯಿಲ್ಲ. ನಾವೇನಿದ್ದರು ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸಧ್ಯ ಚಿಂತನೆ ನಡೆಸಿದ್ದೇವೆ. ಅವರನ್ನು ಸೋಲಿಸಲು ಬೇಕಾದ ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದರು.

ಅನಾರೋಗ್ಯದ ನಿಮಿತ್ತ ಹಾಸನಕ್ಕೆ ಎರಡು ತಿಂಗಳು ಬರಲು ಸಾಧ್ಯವಾಗಲಿಲ್ಲ.

ಜಿಲ್ಲೆಯಲ್ಲಿ ಬರದಛಾಯೆ ಮೂಡಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಕುರಿತು ಯಾವುದೇ ಸಭೆಗಳನ್ನು ನಡೆಯದೆ ಉಸ್ತುವಾರಿ ಸಚಿವರು ಜಿಲ್ಲೆಗೆ ಬಾರದೆ ನಿರ್ಲಕ್ಷ್ಯ ತೋರುತಿದ್ದಾರೆ ಎಂದು ಸಾರ್ವಜನಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಆರೋಗ್ಯ ಸರಿ ಇಲ್ಲದಕಾರಣ ಈಗಾಗಲೇ ಸಚಿವರು ಶಾಸಕರು ನನ್ನ ಆರೋಗ್ಯ ವಿಚಾರಣೆಗೆ ಬಂದುಹೋಗಿದ್ದನ್ನು ನೀವು ನೋಡಿದ್ದೀರಿ.‌ ನನಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಎರಡು ತಿಂಗಳು ಹಾಸನ ಜಿಲ್ಲೆಗೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಇನ್ನೂ ಸಹ ಗುಣಮುಖವಾಗಿಲ್ಲ. ಇನ್ನೂ ಮುಂದೆ ನಿರಂತರವಾಗಿ ಹಾಸನದ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!