ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರೀಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆ ಕಡೆ ಹೋಗಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದ ದರ್ಶನ್ ಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ.
ಹೌದು! ದರ್ಶನ್ ವಿದೇಶಕ್ಕೆ ಹೊಗಲು ಸೆಷನ್ಸ್ ಕೋರ್ಟ್ ಅನುಮತಿ ಅಗತ್ಯ ಎನ್ನಲಾಗಿತ್ತು. ದರ್ಶನ್ ಪರ ವಕೀಲರು ವಿಚಾರಣೆ ವೇಳೆ ಸಿನಿಮಾ ಶೂಟಿಂಗ್ ವಿಚಾರ ಪ್ರಸ್ತಾಪಿಸಿದ್ದರು. ಆದ್ರೆ 8 ವಾರಗಳ ಹಿಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿ, ಈಗ ಸಿನಿಮಾ ಶೂಟಿಂಗ್ ಗಾಗಿ ಅವಕಾಶ ಕೇಳೋದು ಸರಿಯಲ್ಲ ಎಂದು ಎಸ್ಪಿಪಿ ಆಕ್ಷೇಪಿಸಿದ್ರು.
ಆದ್ರೂ ಅಂತಿಮವಾಗಿ ಹೈಕೋರ್ಟ್ ಷರತ್ತು ಸಡಿಸಿಲಿ ಆದೇಶ ನೀಡಿದೆ. ಈ ಆದೇಶ ಕೇವಲ ನಟ ದರ್ಶನ್ ಗೆ ಮಾತ್ರ ನೀಡಿದ್ದು, ಈ ಅನುಮತಿಯಿಂದಾಗಿ ದರ್ಶನ್ ನಂಬಿ ಬಹಳಷ್ಟು ಕೋಟಿ ಬಂಡವಾಳ ಹೂಡಿದ್ದ ನಿರ್ಮಾಪಕರಿಗೆ ಈಗ ಸಮಾಧಾನವಾಗಿದೆ.