ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಿಗೆ ವಾಪಾಸ್ ನೀಡಬಹುದಾಗಿದೆ. ನೋಟು ವಾಪಾಸ್ ಮಾಡಲು ಆರ್‌ಬಿಐ ಅರ್ಜಿ ಬಿಡುಗಡೆ ಮಾಡಿದ್ದು, ಅದರ ಮೂಲಕ ಹಣ ವಾಪಾಸ್ ಮಾಡಬಹುದಾಗಿದೆ.
ಬ್ಯಾಂಕ್‌ನಲ್ಲಿ ಅರ್ಜಿ ದೊರೆಯುತ್ತದೆ, ಅದನ್ನು ತುಂಬಿ ಬ್ಯಾಂಕ್‌ಗೆ ಸಲ್ಲಿಸಿದರೆ ನೋಟುಗಳ ಬದಲಾವಣೆ ಆಗುತ್ತದೆ. ಎರಡು ಸಾವಿರ ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡಿಕೊಳ್ಳಲು ಅರ್ಜಿ ಬೇಕಿಲ್ಲ. ಬದಲಿಸುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ಕೊಂಡೊಯ್ಯಬೇಕಿದೆ ಎನ್ನಲಾಗಿತ್ತು. ಆದರೆ ಯಾವುದೇ ದಾಖಲೆ ಬೇಕಿಲ್ಲ ಎಂದು ಬ್ಯಾಂಕ್‌ಗಳು ಸ್ಪಷ್ಟನೆ ನೀಡಿವೆ.