ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಾವನ್ನು ತಂದುಕೊಳ್ಳುವ ಔಷಧ ಸೇವನೆಗೆ ಅವಕಾಶ ಕಲ್ಪಿಸಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ.
ಲಾ ಕ್ರೊಯಿಕ್ಸ್, ಲಿಬರೇಶನ್ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಗುಣಪಡಿಸಲಾಗದ ಕಾಯಿಲೆಗೆ ಒಳಗಾಗುವ ರೋಗಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ. ಇಂತಹವರಿಗೆ ಈ ಕಾನೂನು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. ಇನ್ನು ತೀವ್ರ ಮಾನಸಿಕ, ಆಲ್‌ಝೈಮರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಈ ಕಾನೂನಿಗೆ ಅರ್ಹರಲ್ಲ ಎಂದು ಕೂಡಾ ಮ್ಯಾಕ್ರಾನ್ ಹೇಳಿದ್ದಾರೆ.
ಆದರೆ ಈ ಕಾನೂನು ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಅವರು ಸ್ಪಷ್ಟ ಮಾಹಿತಿ ನೀಡಿಲ್ಲ. ಕಾನೂನು ಜಾರಿಗೂ ಮುನ್ನ ತಿಂಗಳುಗಳ ಕಾಲ ಶಾಸಕಾಂಗ ಪ್ರಕ್ರಿಯೆಗಳು ನಡೆಯಲಿವೆ. ಈ ಪ್ರಕ್ರಿಯೆ ಬಳಿಕ ಇದು ಜಾರಿಗೆ ಬರುವ ಸಾಧ್ಯತೆ ಇದೆ