Tuesday, May 30, 2023

Latest Posts

ಸ್ಟೈಲಿಶ್ ಸ್ಟಾರ್ ಟು ಐಕಾನ್ ಸ್ಟಾರ್: 20 ವರ್ಷದ ಸಿನಿಮಾ ಕೆರಿಯರ್ ಪೂರೈಸಿದ ಅಲ್ಲು ಅರ್ಜುನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹೀರೋ ಅಲ್ಲು ಅರ್ಜುನ್ ಟಾಲಿವುಡ್ ನಲ್ಲಿ ಸ್ಟೈಲಿಶ್ ಸ್ಟಾರ್ ಅಂತ ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅವರ ಚಲನಚಿತ್ರ ಜೀವನ ಇಂದಿಗೆ (ಮಾರ್ಚ್ 28, 2023) 20 ವರ್ಷಗಳನ್ನು ಪೂರೈಸಿದೆ. ‘ಗಂಗೋತ್ರಿ’ ಸಿನಿಮಾದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ಅಲ್ಲು ಅರ್ಜುನ್.. ಮೊದಲ ಸಿನಿಮಾದಲ್ಲೇ ಬನ್ನಿ ಅವರ ಅಭಿನಯ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಬನ್ನಿ ಆ ನಂತರ ಹಿಂತಿರುಗಿ ನೋಡಲೇ ಇಲ್ಲ.

ನಿರ್ದೇಶಕ ಸುಕುಮಾರ್ ನಿರ್ದೇಶನದ ‘ಆರ್ಯ’ ಚಿತ್ರದ ಮೂಲಕ ಎರಡನೇ ಚಿತ್ರವಾಗಿ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ಈ ಸಿನಿಮಾದಲ್ಲಿ ಪ್ರೇಮಿಯಾಗಿ ಬನ್ನಿ ಒಳ್ಳೆಯ ಅಂಕಗಳನ್ನು ಪಡೆದಿದ್ದಾರೆ. ಈ ಚಿತ್ರದ ಯಶಸ್ಸಿನೊಂದಿಗೆ, ಬನ್ನಿ ತಮ್ಮ ವೃತ್ತಿಜೀವನವನ್ನು ವೇಗದತ್ತ ಕೊಂಡೊಯ್ದಿದ್ದಾರೆ. ನಡುವೆ ಒಂದಷ್ಟು ಫ್ಲಾಪ್ ಗಳು ಬಂದರೂ ಹಿಮ್ಮೆಟ್ಟದೆ, ಸತತವಾಗಿ ಸಿನಿಮಾ ಮಾಡುತ್ತಲೇ ಹೋದರು. ಸುಕುಮಾರ್ ಜೊತೆ ಆರ್ಯ, ಆರ್ಯ-2 ಸಿನಿಮಾ ಮಾಡಿದ್ದ ಬನ್ನಿ ‘ಪುಷ್ಪ-1’ ಮೂಲಕ ಹ್ಯಾಟ್ರಿಕ್ ಸಕ್ಸಸ್ ಪಡೆದರು. ಸುಕುಮಾರ್ ಈ ಸಿನಿಮಾದಲ್ಲಿ ಬನ್ನಿಯನ್ನು ಸಂಪೂರ್ಣವಾಗಿ ಮಾಸ್ ಹೀರೋ ಆಗಿ ಪರಿವರ್ತಿಸಿದ್ದಾರೆ.

ಜೀವನದಲ್ಲಿ ಒಮ್ಮೆ ಮಾತ್ರ ಪುಷ್ಪದಂತಹ ಪಾತ್ರ ಬರುತ್ತದೆ . ಈ ಚಿತ್ರವು ತೆಲುಗು ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಅದ್ಭುತವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಪುಷ್ಪಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಗಳ ಸುರಿಮಳೆಗೈದಿದೆ. ಮತ್ತು ಈ ಚಿತ್ರದ ಅದ್ಭುತ ಯಶಸ್ಸಿನೊಂದಿಗೆ, ಈಗ ಪುಷ್ಪ-2 ಚಿತ್ರೀಕರಣದಲ್ಲಿದ್ದಾರೆ.

ಸ್ಟೈಲಿಶ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಬನ್ನಿ, ಪುಷ್ಪ ಚಿತ್ರದ ಮೂಲಕ ಐಕಾನ್ ಸ್ಟಾರ್ ಆಗಿ ಬದಲಾದರು. ಬನ್ನಿ ಯೂತ್ ಐಕಾನ್ ಆಗಿ ಮಾರ್ಪಾಡು ಮಾಡಿಕೊಂಡಿರುವ ರೀತಿ ಅದ್ಭುತ ಎನ್ನುತ್ತಾರೆ ಅವರ ಅಭಿಮಾನಿಗಳು. ಸ್ಟೈಲ್‌ಗೆ ಕೇರಾಫ್ ಆಗಿರುವ ಬನ್ನಿ, ತಮ್ಮ 20 ವರ್ಷಗಳ ಚಲನಚಿತ್ರ ಜೀವನದಲ್ಲಿ ತನ್ನನ್ನು ಪ್ರೀತಿಸಿದ ಮತ್ತು ಮೆಚ್ಚಿದ ಪ್ರೇಕ್ಷಕರು, ಹಿತೈಷಿಗಳು ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!