Tuesday, March 21, 2023

Latest Posts

CINEMA| ಪುಷ್ಪ-2 ಬ್ರೇಕ್: ರಾಜಸ್ಥಾನದಲ್ಲಿ ಕುಟುಂಬ ಸಮೇತ ಎಂಜಾಯ್ ಮಾಡುತ್ತಿರುವ ಬನ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ನಾಯಕನಾಗಿ ಹೆಸರು ಮಾಡಿದ್ದಾರೆ. ಇದೀಗ ಪುಷ್ಪ 2 ಸಿನಿಮಾ ಶೂಟಿಂಗ್ ಶುರುವಾಗಿದೆ. ಈಗಾಗಲೇ ಎರಡು ಶೆಡ್ಯೂಲ್‌ಗಳ ಚಿತ್ರೀಕರಣ ನಡೆದಿದೆ.

ಅಲ್ಲು ಅರ್ಜುನ್ ಪುಷ್ಪ 2 ಚಿತ್ರಕ್ಕೆ ಬ್ರೇಕ್ ಕೊಟ್ಟು, ಕುಟುಂಬದೊಂದಿಗೆ ರಾಜಸ್ಥಾನ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬ ಸಮೇತ ಅಲ್ಲಿನ ಐತಿಹಾಸಿಕ ಸ್ಥಳಗಳು, ಅರಣ್ಯಗಳು, ಪ್ರವಾಸಿ ಸ್ಥಳಗಳನ್ನೆಲ್ಲ ನೋಡಿ ಆನಂದಿಸುತ್ತಿದ್ದಾರೆ. ಬನ್ನಿ ಪತ್ನಿ ಸ್ನೇಹಾ ರೆಡ್ಡಿ ಅವರು ರಾಜಸ್ಥಾನದ ವಿವಿಧ ಪ್ರವಾಸಿ ಸ್ಥಳಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಅಲ್ಲು ಅರ್ಜುನ್ ಅವರು ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಾಣಿಗಳನ್ನು ತನ್ನ ಮಕ್ಕಳಿಗೆ ತೋರಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಬನ್ನಿ ಶೂಟಿಂಗ್ ಗೆ ಗ್ಯಾಪ್ ಕೊಟ್ಟು ರಜೆಯನ್ನು ಎಂಜಾಯ್ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ರಾಮೋಜಿ ಫಿಲಂಸಿಟಿಯಲ್ಲಿ ಬನ್ನಿ ಇಲ್ಲದಿದ್ದರೂ ಪುಷ್ಪ 2 ಚಿತ್ರೀಕರಣ ನಡೆಯುತ್ತಿದೆಯಂತೆ. ಬನ್ನಿ ಇಲ್ಲದ ದೃಶ್ಯಗಳನ್ನು ತೆರೆಗೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪ 2 ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!