CINE| ಪುಷ್ಪ-2 ಸಿನಿಮಾ ರಿಲೀಸ್‌ ದಿನಾಂಕ ಪ್ರಕಟಿಸಿದ ಚಿತ್ರತಂಡ! ಅಲ್ಲಿವರೆಗೂ ಕಾಯಲೇಬೇಕು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಪುಷ್ಪಾ ಎರಡನೇ ಭಾಗದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪುಷ್ಪ 2 ಮುಂದಿನ ವರ್ಷ ಆಗಸ್ಟ್ 15, 2024 ರಂದು ಬಿಡುಗಡೆಯಾಗಲಿದೆ ಎಂದು ಚತ್ರತಂಡ ಅಧಿಕೃತವಾಗಿ ಘೋಷಿಸಿತು.

ಸಿನಿಮಾ ರಿಲೀಸ್ ಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗ ಈಗ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಯಾಕೆ, ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಕೆಲ ದಿನಗಳ ಹಿಂದಿನವರೆಗೂ ಸಿನಿಮಾವೊಂದಕ್ಕೆ 100 ಕೋಟಿ ಕಲೆಕ್ಷನ್ ಎಂದರೆ ಉಹುಂ ಎಂದು ಜನ ಅಂದುಕೊಂಡಿದ್ದರು ಆದರೆ ಈಗ ಎಲ್ಲವೂ 1000 ಕೋಟಿ ಅಂದರೂ ಆಶ್ಚರ್ಯಪಡಬೇಕಿಲ್ಲ. ಇತ್ತೀಚಿಗೆ ಸ್ಟಾರ್ ಹೀರೋಗಳು ಹೈಪ್ ಸಿನಿಮಾಗಳು, ನಿರೀಕ್ಷೆಯೊಂದಿಗೆ ಬಂದರೆ ಖಂಡಿತಾ 1000 ಕೋಟಿ ಗುರಿ ಹಾಕಿಕೊಳ್ಳುತ್ತಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೆ ಪುಷ್ಪ 1 ಸುಮಾರು 300 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಹೀಗಾಗಿ ಪುಷ್ಪ 2 ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

ಪುಷ್ಪ 2 ಚಿತ್ರತಂಡ 1000 ಕೋಟಿ ಗುರಿ ಇಟ್ಟುಕೊಂಡಿದೆ ಎಂಬುದು ಟಾಲಿವುಡ್ ಟಾಕ್. ಅದಕ್ಕೇ ಆಗಸ್ಟ್ 15ಕ್ಕೆ ರಿಲೀಸ್ ಮಾಡ್ತೀವಿ ಅಂತ ಒಂದು ವರ್ಷ ಮೊದಲೇ ಡೇಟ್ ಬ್ಲಾಕ್ ಮಾಡಿದ್ರು. ಇದರಿಂದಾಗಿ ಕೆಲವು ಚಿತ್ರಗಳು ಆ ದಿನಾಂಕದಂದು ತೆರೆಗೆ ಬರೋದಿಲ್ಲ. ಅದರ ಹೊರತಾಗಿ ಆ ದಿನಾಂಕದ ಸುಮಾರು 5 ದಿನಗಳ ರಜೆಗಳಿವೆ. ಹಾಗಾಗಿ ಈ ದಿನಾಂಕ ನಿಗದಿ ಮಾಡಿದ್ದಾರೆಂಬುದು ವಿಶ್ಲೇಷಕರ ಅಭಿಪ್ರಾಯ.

ಆ ವಾರ ಬೇರೆ ಸಿನಿಮಾಗಳು ರಿಲೀಸ್ ಆಗದಿದ್ದರೆ ಕಲೆಕ್ಷನ್ ಜಾಸ್ತಿಯಾಗುತ್ತೆ. ಅದಕ್ಕಾಗಿಯೇ ಚಿತ್ರತಂಡ ಕನಿಷ್ಠ 5 ದಿನಗಳ ರಜೆಯ ದಿನಾಂಕವನ್ನು ಆಯ್ಕೆ ಮಾಡಿ ಆ ದಿನವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ 1000 ಕೋಟಿ ಗುರಿ ಮುಟ್ಟುವ ನಿರೀಕ್ಷೆ ಚಿತ್ರತಂಡದ್ದು. ಮತ್ತು ಪುಷ್ಪ 2 ಮುಂದಿನ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಸಂಚಲನವನ್ನು ಸೃಷ್ಟಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!