ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ ಲಾಂಚ್ ಆದ ಕೆಲವೇ ದಿನದಲ್ಲಿ ಇಸ್ರೋ ವಿಜ್ಞಾನಿ ಅಶುತೋಷ್ ಅವರ ಕಾರಿಗೆ ಕಲ್ಲೆಸೆತ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ಅಶುತೋಷ್ ಕಾರಿಗೆ ಐವರು ಕಲ್ಲೆಸೆದಿದ್ದು, ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಶುತೋಷ್ ಮಾದನಾಯಕನಹಳ್ಳಿಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಪೊಲೀಸರು ಮೈಲಾರಿ, ನವೀನ್ ಹಾಗೂ ಶಿವರಾಜ್‌ನನ್ನು ಬಂಧಿಸಿದ್ದಾರೆ. ಸೋಮ, ಕೀರ್ತಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ ದರೋಡೆಗೆ ಹೊಂಚು ಹಾಕುತ್ತಾ ಕುಳಿತಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು, ಮೂವರ ವಿಚಾರಣೆ ನಡೆಸುತ್ತಿದ್ದಾರೆ.