ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಸೀಸನ್ 10ರ ಫಿನಾಲೆ ನೆನ್ನೆ ಮುಗಿದಿದ್ದು, ನಟ ಕಾರ್ತಿಕ್ ಮಹೇಶ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ.
ಪ್ರತಾಪ್ ಹಾಗೂ ಕಾರ್ತಿಕ್ ಕೈಯನ್ನು ಸುದೀಪ್ ಹಿಡಿದಿದ್ದು, ಕಾರ್ತಿಕ್ ಕೈ ಎತ್ತಿದ್ದಾರೆ. ಇಡೀ ಮನೆಯಲ್ಲಿ ಹಲವು ಏಳು ಬೀಳುಗಳನ್ನು ಕಾರ್ತಿಕ್ ಕಂಡಿದ್ದಾರೆ.
ಫಿಸಿಕಲ್ ಟಾಸ್ಕ್, ಮೆಂಟಲ್ ಟಾಸ್ಕ್‌ಗಳಲ್ಲಿಯೂ ಕಾರ್ತಿಕ್ ಗೆದ್ದಿದ್ದಾರೆ. ಕಾರ್ತಿಕ್‌ಗೆ ಬರೋಬ್ಬರಿ 2,97,39,904 ಮತಗಳು ಬಿದ್ದಿದ್ದು, ಜನಾರ್ಶೀವಾದಕ್ಕೆ ಕಾರ್ತಿಕ್ ಕಾರಣರಾಗಿದ್ದಾರೆ.
ಮನೆಯಲ್ಲಿ ಬರೀ ಸಂಗೀತಾ ಹಾಗೂ ನಮ್ರತಾ ಜೊತೆ ಕ್ಲೋಸ್ ಇದ್ದುಕೊಂಡು ಫಿನಾಲೆವರೆಗೆ ಬಂದಿದ್ದರು ಎಂದು ಹೇಳುವವರಿಗೆ ಉತ್ತರ ಸಿಕ್ಕಿದ್ದು, ಕಾರ್ತಿಕ್ ಶೈಲಿ, ನಡವಳಿಕೆ ಎಲ್ಲವೂ ಜನರಿಗೆ ಇಷ್ಟವಾಗಿದೆ ಎನ್ನೋದಕ್ಕೆ ವೋಟಿಂಗ್ ಸಾಕ್ಷಿಯಾಗಿದೆ.
50 ಲಕ್ಷ ರೂಪಾಯಿ, ಒಂದು ಬ್ರೆಜಾ ಕಾರ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕಾರ್ತಿಕ್ ಗೆದ್ದಿದ್ದಾರೆ.