Wednesday, February 28, 2024

ಗುಮ್ಮಟ ನಗರಿಯಲ್ಲಿ ನಡುಗಿದ ಭೂಮಿ : ಹೆದರಿ ಮನೆಯಿಂದ ಹೊರಬಂದ ಜನ

ದಿಗಂತ ವರದಿ ವಿಜಯಪುರ:

ಗುಮ್ಮಟ ನಗರಿಯ ಕೆಲ ಬಡಾವಣೆಗಳಲ್ಲಿ ಭಾನುವಾರ ತಡರಾತ್ರಿ 2 ಬಾರಿ ಭೂಮಿ ಕಂಪಿಸಿದ ಅನುಭವಕ್ಕೆ, ಜನರು ಭೀತಿಗೊಳ್ಳುವಂತಾಗಿದೆ.

ತಡರಾತ್ರಿ ರಾತ್ರಿ 12.22 ಹಾಗೂ 1.20 ಕ್ಕೆ ಲಘು ಭೂಕಂಪನವಾಗಿದ್ದು, ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ 2.9 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಅಲ್ಲದೆ, ಭೂಮಿಯ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿರುವುದು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!