ಅಂತೂ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್ ಆಗಲಿದೆ. ಫೆಬ್ರವರಿ 13ರಂದು ಉಭಯ ನಾಯಕರು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಲಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದು ಉಭಯ ನಾಯಕರ ಮೊದಲ ಭೇಟಿಯಾಗಲಿದೆ. ಅದು ಮಾತ್ರವಲ್ಲ. ವಾಷಿಂಗ್ಟನ್​ಗೆ ಭೇಟಿ ನೀಡಲಿರುವ ಕೆಲವು ಆಯ್ದ ನಾಯಕರಲ್ಲಿ ಮೋದಿ ಕೂಡ ಒಬ್ಬರಾಗಿದ್ದಾರೆ.

ಯೋಜನೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್​ನ ಎರಡು ದಿನಗಳ ಪ್ರವಾಸದ ಬಳಿಕ ವಾಷಿಂಗ್ಟನ್​ ಡಿಸಿಗೆ ಪ್ರವಾಸ ಬೆಳೆಸಲಿದ್ದಾರೆ. ಶುಕ್ರವಾರದಂದು ವಿದೇಶಾಂಗ ಸಚಿವಾಲಯದಲ ವಕ್ತಾರ ರಣ್​ಧೀರ್ ಜೈಸ್ವಾಲ್ ಹೇಳುವ ಪ್ರಕಾರ ಯುಎಸ್​ ಪ್ರಧಾನಿ ಮೋದಿಯವರ ಭೇಟಿ ಆದಷ್ಟು ಬೇಗ ಆಗಬೇಕು ಎಂದು ಬಯಸಿತ್ತು. ಸದ್ಯ ಫೆಬ್ರವರಿ 13 ರಂದು ಮೋದಿಯವರು ಅಮೆರಿಕಾ ಪ್ರವಾಸ ಬೆಳೆಸಲಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಪ್ರಮಾಣ ವಚನ ಸ್ವೀಕಾರದ ಬಳಿಕ ಜನವರಿ 27 ರಂದು ಅವರು ಮೋದಿಯವರೊಂದಿಗೆ ಫೋನ್​​ನಲ್ಲಿ ಸಂಭಾಷಣೆ ನಡೆಸಿದ್ದರು. ಉಭಯ ದೇಶಗಳ ಬಾಂಧವ್ಯ ಹಾಗೂ ಪಾಲುದಾರಿಕೆ ಮುಂದುವರಿಸುವುದರ ಬಗ್ಗೆ ಚರ್ಚೆ ಮಾಡಿದ್ದರು. ಅಲ್ಲದೇ ಅಮೆರಿಕಾಗೆ ಆದಷ್ಟು ಬೇಗ ಬರುವಂತೆ ಆಹ್ವಾನವನ್ನು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!