ಆಳ್ವಾಸ್ ಜಂಬೂರಿಯಲ್ಲಿ ಕಾಡಿನಲ್ಲಿ ಸಂಭ್ರಮಿಸಿದ ಸ್ಕೌಟ್ ಗೈಡ್ಸ್ ಸಮೂಹ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದ.ಕ. ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಆವರಣದಲ್ಲಿ ವಿಶ್ವದ ಪ್ರಥಮ ಅಂತಾರಾಷ್ಟ್ರೀಯ ಸ್ಕೌಟ್ ಗೈಡ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಈಗ ವಿಶ್ವದ ಕೇಂದ್ರಬಿಂದುವಾಗಿದೆ. ಇಲ್ಲಿ ಆಯೋಜಿಸಲಾಗಿರುವ ವಿವಿಧ ಮೇಳಗಳು ಎಲ್ಲಾ ವಯೋಮಾನದವರನ್ನು ‘ಸಾಂಸ್ಕೃತಿಕ ಹಬ್ಬ’ದಲ್ಲಿ ಒಂದುಗೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.

ಶೋಲಾ ಕಾಡಿನಲ್ಲಿ ಸಂಭ್ರಮ

ಅರಣ್ಯ ಇಲಾಖೆಯ ಶೋಲಾ ಕಾಡಿನಲ್ಲಿ ಸ್ಕೌಟ್ ಗೈಡ್ಸ್ ಸಮೂಹ ವಿವಿಧ ರೀತಿಯಲ್ಲಿ ಸಂಭ್ರಮಿಸಿದ್ದು ಮೊದಲ ದಿನದ ಹೈಲೈಟ್‌ಗಳಲ್ಲೊಂದು. ಜಂಗಲ್ ವಾಕ್ ಮೂಲಕ ಅರಣ್ಯದ ಅನುಭವ ಪಡೆದರು. ಬೃಹತ್ ಹುಲಿಯ ಮುಖದ ಮಾದರಿಯ ದ್ವಾರದ ಮೂಲಕ ಅರಣ್ಯದೊಳಗೆ ಪ್ರವೇಶಿಸಿ ಮುಂದೆ ಸಾಗಿದರೆ ಬಾಯ್ದೆರೆದು ನಿಂತ ಮೊಸಳೆಯ ಬಾಯಿ ಮೂಲಕ ಗುಹಾ ಪ್ರವೇಶ. ಅಲ್ಲಿಂದ ಕಾನನದ ಯಾನ ಆರಂಭ. ಕೃತಕ ಜಲಪಾತ, ಮರದಿಂದ ಮರಕ್ಕೆ ರಚಿಸಿದ ವಿಶೇಷ ಸೇತುವೆ ಮೂಲಕ ಸಂಚಾರಕ್ಕೆ ವ್ಯವಸ್ಥೆ. ಶೋಲಾ ಅರಣ್ಯದ ಮಾದರಿ ಒಂದು ಹೊಸ ಪರಿಕಲ್ಪನೆ. ದೂರದೂರುಗಳಿಂದ ಬಂದ ವಿದ್ಯಾರ್ಥಿ ಸಮೂಹ ಆಸಕ್ತಿಯಿಂದ ಕಾಡಿನಲ್ಲಿ ಸಂಭ್ರಮಿಸಿದರು. ಆಟದೊಂದಿಗೆ ಪಾಠ ಎಂಬಂತೆ ಹಲವು ವಿಚಾರಗಳನ್ನು ಗ್ರಹಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!