POSITIVE | ನಿಮ್ಮ ಬಗ್ಗೆ ಸದಾ ಒಳ್ಳೆಯದನ್ನೇ ಮಾತನಾಡಿಕೊಳ್ಳಿ.. ಇದು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ..

ನಿಮ್ಮ ಬಗ್ಗೆ ಬೇರೆ ಯಾರೋ ಒಳ್ಳೆ ವಿಷಯಗಳನ್ನು ಹೇಳಬೇಕಿಲ್ಲ. ನೀವೇ ನಿಮ್ಮ ಬಗ್ಗೆ ಒಳ್ಳೆ ವಿಷಯಗಳನ್ನು ಹೇಳಿಕೊಳ್ಳಿ. ಏಕೆ ಗೊತ್ತಾ? ಪಾಸಿಟಿವ್‌ ಅಫರ್‌ಮೇಷನ್ಸ್‌ ನಿಮ್ಮ ಗೆಲುವಿಗೆ ಕಾರಣವಾಗುತ್ತವೆ. ಇವು ನಿಮ್ಮ ದೇಹಕ್ಕೆ ಪಾಸಿಟಿವ್‌ ಫೀಲಿಂಗ್ಸ್‌ ಕಳಿಸುತ್ತದೆ, ನಿಮ್ಮ ಹಾರ್ಮೋನ್‌ಗಳು ಖುಷಿಯಾಗುತ್ತವೆ. ಒಟ್ಟಾರೆ ನಿಮ್ಮ ದೇಹ ಹಾಗೂ ಆತ್ಮ ಖುಷಿಯಾಗಿರುತ್ತದೆ. ಯಾವ ರೀತಿ ಪಾಸಿಟಿವ್‌ ಮಾತುಗಳು?

ನನಗೆ ನನ್ನ ಬಗ್ಗೆ ತುಂಬಾ ಹೆಮ್ಮೆ ಇದೆ

ನಾನು ಪ್ರೀತಿಗೆ ಅರ್ಹ

ನಾನು ಜವಾಬ್ದಾರಿಯುತ ವ್ಯಕ್ತಿ

ನನ್ನ ಜೀವನಕ್ಕೆ ನಾನು ಆಭಾರಿ

ನನಗೆ ಯಾವುದೇ ಪಶ್ಚಾತ್ತಾಪವಿಲ್ಲ

ನನಗೆ ನಾನೇ ಸಾಟಿ

ನನ್ನಿಂದ ಜಗತ್ತಿನಲ್ಲಿ ಸಣ್ಣ ಪುಟ್ಟದಾದ್ರೂ ಪರವಾಗಿಲ್ಲ, ಬೆಳವಣಿಗೆ ಇದೆ.

ನನಗೆ ನೋವು ಮಾಡಿದವರನ್ನು ಕ್ಷಮಿಸಿ ಮುಂದುವರಿದಿದ್ದೇನೆ.

ನನ್ನ ಮೇಲೆ ನನಗೆ ನಂಬಿಕೆ ಇದೆ, ನನ್ನ ನಿರ್ಧಾರಗಳು ಸರಿಯಿವೆ.

ನಾನು ಸ್ಟ್ರಾಂಗ್‌ ಪರ್ಸನಾಲಿಟಿ, ನನ್ನ ಹೃದಯದ ಮಾತನ್ನು ಫಾಲೋ ಮಾಡುತ್ತೇನೆ.

ಕನ್ನಡಿಯ ಮುಂದೆ ನಿಂತು ಈ ಸಾಲುಗಳನ್ನು ಪದೇ ಪದೆ ಹೇಳಿಕೊಳ್ಳಿ, ನಿಮ್ಮ ಜೀವನದ ದಿಕ್ಕು ಬದಲಾಗಲಿದೆ. ನೀವು ಅಂದುಕೊಂಡಿದ್ದನ್ನು ಸಾಧಿಸುವ ಛಲ ನಿಮಗೆ ಸಿಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!