ಅಮರನಾಥ ಯಾತ್ರೆ: ಸುಮಾರು 2.66 ಲಕ್ಷ ಯಾತ್ರಾರ್ಥಿಗಳಿಂದ ಹಿಮಲಿಂಗ ದರುಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಳೆದ 13 ದಿನಗಳಲ್ಲಿ ಸುಮಾರು 2.66 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆ ನೆರವೇರಿಸಿದ್ದು, ಶುಕ್ರವಾರ 4,434 ಯಾತ್ರಾರ್ಥಿಗಳನ್ನೊಳಗೊಂಡ ತಂಡ ಕಾಶ್ಮೀರದಿಂದ ತೆರಳಿತು.

ಈ ಬಾರಿ ಅಮರನಾಥ ಯಾತ್ರೆಗೆ ಆಗಮಿಸುವ ಯಾತ್ರಿಗಳ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ ಮತ್ತು ಯಾತ್ರಾರ್ಥಿಗಳ ಉತ್ಸಾಹ ಮುಂದುವರೆದಿದೆ ಎಂದು ಅಮರನಾಥ ದೇವಾಲಯ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಜೂನ್ 29 ರಂದು ಯಾತ್ರೆ ಪ್ರಾರಂಭವಾದಾಗಿನಿಂದ, ಗುರುವಾರದವರೆಗೆ 2.66 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹೆಯೊಳಗೆ ‘ಹಿಮಲಿಂಗದ ದರ್ಶನ’ ಪಡೆದ್ದಾರೆ. ಗುಹೆ ದೇಗುಲವನ್ನು ತಲುಪಲು ದಕ್ಷಿಣ ಮತ್ತು ಉತ್ತರ ಬೇಸ್ ಕ್ಯಾಂಪ್ ನಿಂದ ಹೆಲಿಕಾಪ್ಟರ್ ಸೇವೆ ಬಳಸಿದ 10,000 ಕ್ಕೂ ಹೆಚ್ಚು ಯಾತ್ರಿಕರು ಇದರಲ್ಲಿ ಸೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!