ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಅಮರನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಶ್ರೀ ಅಮರನಾಥ ಶ್ರೈನ್ ಬೋರ್ಡ್ ದೇಶಾದ್ಯಂತ ಏಪ್ರಿಲ್ 15ರಿಂದ ಮುಂಗಡ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲು ತೀರ್ಮಾನಿಸಿದೆ. ಭಕ್ತರು ದೇಶದ ವಿವಿಧ ಭಾಗಗಳಲ್ಲಿರುವ 550ಕ್ಕೂ ಹೆಚ್ಚು ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಯಾತ್ರಾ ಪರವಾನಗಿ ಪಡೆಯಲು ನೋಂದಾಯಿಸಿಕೊಳ್ಳಬಹುದು.
ಈ ಬಾರಿ ನೋಂದಣಿ ಪ್ರಕ್ರಿಯೆಯನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ನಡೆಸಲಾಗುತ್ತದೆ. ಪ್ರತಿದಿನ ನಿಗದಿತ ಕೋಟಾ ಇರಲಿರುವುದರಿಂದ ಯಾತ್ರೆಗೆ ತೆರಳುವವರು ಸಾಧ್ಯವಾದಷ್ಟು ಬೇಗ ನೋಂದಣಿ ಪೂರ್ಣಗೊಳಿಸುವಂತೆ ಮಂಡಳಿ ಸೂಚಿಸಿದೆ.
ಮಾರ್ಗಸೂಚಿಗಳ ಪ್ರಕಾರ 13ರಿಂದ 70 ವರ್ಷ ವಯಸ್ಸಿನವರು ಮಾತ್ರ ಯಾತ್ರೆಗೆ ಅರ್ಹರಾಗಿರುತ್ತಾರೆ. ಜೊತೆಗೆ 6 ವಾರಗಳಿಗಿಂತ ಹೆಚ್ಚು ಗರ್ಭಿಣಿಯರಿಗೆ ಯಾತ್ರೆಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ:
ಭದ್ರತೆ ಹಾಗೂ ಯಾತ್ರಿಕರ ದಾಖಲೆಗಳನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ಈ ಬಾರಿ ಆಧಾರ್ ಆಧಾರಿತ ಬಯೋಮೆಟ್ರಿಕ್ e-KYC ದೃಢೀಕರಣ ಕಡ್ಡಾಯ ಮಾಡಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಅಧಿಕಾರಿಗಳಿಗೆ ಯಾತ್ರಿಕರ ಮಾಹಿತಿ ತಕ್ಷಣ ಲಭ್ಯವಾಗುವಂತೆ ಈ ಕ್ರಮ ಸಹಾಯಕವಾಗಲಿದೆ.
ಯಾತ್ರೆಗೆ ತೆರಳುವವರು ಕಡ್ಡಾಯ ಆರೋಗ್ಯ ಪ್ರಮಾಣಪತ್ರವನ್ನು ಕೂಡ ಹೊಂದಿರಬೇಕು ಎಂದು ಮಂಡಳಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಯಾತ್ರೆಯ ದಿನಾಂಕ ಹಾಗೂ ಮಾರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪ್ರಕಟವಾಗುವ ಸಾಧ್ಯತೆ ಇದೆ.



