ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಸೂರ್ಯಕುಮಾರ್ ಯಾದವ್ ಅವರು ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವನ್ನು ಪತ್ನಿ ದೇವಿಶಾ ಶೆಟ್ಟಿ ಜತೆ ಆಚರಿಸಿಕೊಂಡಿದ್ದಾರೆ.
ಈ ವೇಳೆಸೂರ್ಯಕುಮಾರ್ ಅವರು ಪತ್ನಿಗೆ ಶುಭ ಹಾರೈಸಿರುವ ಪೋಸ್ಟ್ ವೈರಲ್ ಆಗಿದೆ.
ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕ್ಯಾಚ್ ಅನ್ನು ಸೂರ್ಯಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆಯ ವೇಳೆಯೂ ಬಳಸಿಕೊಂಡಿದ್ದಾರೆ. ‘ಆ ಕ್ಯಾಚ್ ಹಿಡಿದು 8 ದಿನಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದಾರೆ.
ಸದ್ಯ ಸೂರ್ಯ ಅವರು ಈ ಪೋಸ್ಟ್ ವೈರಲ್ ಆಗಿದೆ. ಜುಲೈ 7, 2016ರಲ್ಲಿ ಸೂರ್ಯ ಮತ್ತು ದೇವಿಶಾ ವಿವಾಹವಾಗಿದ್ದರು. ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರಾಗಿದ್ದಾರೆ.